ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ನೂಕಾಟ

ಬೆಂಗಳೂರು: ನಗರದಲ್ಲಿ ಮಂಗಳವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ಕಾರ್ಯಕಾರಣಿ ಸಭೆಯಲ್ಲಿ ಪರಸ್ಪರ ಆರೋಪದ ಕಾರಣ ಗೊಂದಲ ಮೂಡಿದ್ದು, ತಳ್ಳಾಟ, ನೂಕಾಟಕ್ಕೆ ಸಾಕ್ಷಿಯಾಯಿತು.
'ಅಧ್ಯಕ್ಷ ಷಡಾಕ್ಷರಿ ಕೆಲ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದರು.
ಪ್ರತಿಭಟನೆ: ಹಲ್ಲೆ ಘಟನೆ ಖಂಡಿಸಿ ಶಾಂತಾರಾಮ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡರ ನೇತೃತ್ವದಲ್ಲಿ ನೌಕರರು, ಸಂಘದ ದ್ವಾರ, ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಮನವೊಲಿಸಿ ಪ್ರತಿಭಟನೆ ಕೈಬಿಡಲು ಮನವಿ
ಮಾಡಿದರು.
'ನೌಕರರ ಸಂಘದ ಹೋರಾಟಕ್ಕೆ ಬೆಂಬಲವಿದೆ. ಎನ್‌ಪಿಎಸ್ ರದ್ದತಿ ಆದೇಶ ಹಾಗೂ 2022ರ ಜುಲೈನಿಂದಲೇ ಶೇ 40ರಷ್ಟು ಫಿಟ್‌ಮೆಂಟ್ ನೀಡುವುದು, 7ನೇ ವೇತನ ಆಯೋಗದ ಅಧಿಕೃತ ಆದೇಶದೊಂದಿಗೆ ಹೋರಾಟ ಅಂತ್ಯಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ' ಎಂದು ಶಾಂತಾರಾಮ ಅವರು ತಮ್ಮ ನೇತೃತ್ವದ ಸಂಘದ ನಿಲುವನ್ನು ಸ್ಪಷ್ಟಪಡಿಸಿದರು.