ಚುನಾವಣೆ ಹೊತ್ತಲ್ಲಿ ಪೊಲೀಸರ ಭರ್ಜರಿ ಬೇಟೆ : ಬೆಂಗಳೂರಿನಲ್ಲಿ ಒಂದೇ ದಿನ 1.85 ಕೋಟಿ ಹಣ, 3.4 ಕೆಜಿ ಚಿನ್ನ ಜಪ್ತಿ

ಬೆಂಗಳೂರು : ಚುನಾವಣೆ ಹೊತ್ತಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 1.85 ಕೋಟಿ ನಗದು, 3.4 ಕೆಜಿ ಚಿನ್ನಾಭರಣ ಹಾಗೂ 36 ಕೆಜಿ ಬೆಳ್ಳಿ ಆಭರಣಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲಸೂರು ಗೇಟ್ ಬಳಿ 35 ಲಕ್ಷ, ಎಸ್ ಜೆ ಪಾರ್ಕ್ ಬಳಿ 10 ಲಕ್ಷ, ಲಗ್ಗೆರೆಯ ಬಳಿ 1 ಕೋಟಿ, ಅಮೃತಳ್ಳಿ ಬಳಿ 30 ಲಕ್ಷ, ಬೆಂಗಳೂರು ಗಡಿ ಭಾಗದಲ್ಲಿ 10 ಲಕ್ಷ ರೂ ಹಣ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅದೇ ರೀತಿ ಕೋಟ್ಯಾಂತರ ರೂ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ.ಇನ್ನೂ ಕೋರಮಂಗಲದಲ್ಲಿ536 ಸೀರೆ, 504 ಕುಕ್ಕರ್ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಚುನಾವಣೆ ನೀತಿ ಸಂಹಿತೆ ಜಾರಿ; ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೋಸ್ಟರ್ ತೆರವುಗೊಳಿಸಿದ ಬಿಬಿಎಂಪಿ
ಬೆಂಗಳೂರು: ಹದಿನಾರನೇ ವಿಧಾನಸಭೆ ಕರ್ನಾಟಕ ರಾಜ್ಯ ವಿಧಾನಸಭೆಗೆ ಇಂದು ದಿನಾಂಕವನ್ನು ನಿಗದಿ ಮಾಡಲಾಗಿದೆ. ಒಟ್ಟು ಒಂದೇ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜಕೀಯ ಪೋಸ್ಟರ್ ಹಾಗೂ ಬ್ಯಾನರ್ ತೆರವುಗೊಳಿಸುತ್ತಿದ್ದಾರೆ. ತೆರವು ಮಾಡಲು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಬೆಂಗಳೂರು ನಗರದ ಕಾಂಗ್ರೆಸ್ ಉಮಾಪತಿ ಶ್ರೀನಿವಾಸ್ ಅವರ ಪೊಸ್ಟರ್ ಕಿತ್ತುಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸ್ ಗೌಡವ ಪೋಸ್ಟರ್ನ್ನು ಗೋಡೆಯ ಮೇಲೆ ಅಂಟಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮೇಲಾಧಿಖಾರಿಗಳು ಸೂಚನೆಯಂತೆ ಬಿಬಿಎಂಪಿ ಸಿಬ್ಬಂದಿ ಪೋಸ್ಟರ್ ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಅವರು ಬಿಜೆಪಿ ಪೋಸ್ಟರ್ ಮಾತ್ರ ಬಿಟ್ಟು ಕೇವಲ ಕಾಂಗ್ರೆಸ್ ಪೋಸ್ಟರ್ ಅನ್ನು ಕಿತ್ತು ಹಾಕಿದ್ದಾರೆ. ಇದರಿಂದಾಗಿ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯ ಪೋಸ್ಟರ್ ಪಕ್ಕದಲ್ಲಿ ಸತೀಶ್ ರೆಡ್ಡಿ ಅವರ ಪೋಸ್ಟರ್ ಗಳಿದ್ದರೂ ಬಿಬಿಎಂಪಿಯವರು ತೆರವುಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.