ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಎಫ್ಐಆರ್

ಟಿಪ್ಪು ಭಾವಚಿತ್ರ ವಿಚಾರದಲ್ಲಿ ಅಕ್ರಮಕೂಟ ರಚಿಸಿ ಒಂದೆಡೆ ಗುಂಪುಸೇರಿ ಇಳಕಲ್ ತಹಶೀಲ್ದಾರ್ ಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಕಂದಾಯ ಇಲಾಖೆ ನೌಕರ ಮಹೇಶ ಎನ್ನುವವರು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅವರ ಸಂಗಡಿಗರ ವಿರುದ್ಧ ದೂರು ನೀಡಿದ್ದು, ಒಟ್ಟು 27 ಜನರ ವಿರುದ್ದ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.