ಬಡವರ ಬಾದಾಮಿಗೆ ಭರ್ಜರಿ ಬೆಲೆ

ಬಡವರ ಬಾದಾಮಿಗೆ ಭರ್ಜರಿ ಬೆಲೆ

ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಶೇಂಗಾಗೆ ಇತಿಹಾಸದಲ್ಲಿಯೇ ಕಾಣದಷ್ಟು ಭರ್ಜರಿ ಬೆಲೆ ಈ ವರ್ಷ ದೊರೆತಿದೆ. ಅತಿವೃಷ್ಟಿಯಿಂದ ಗುಣಮಟ್ಟದ ಕಾಯಿ ಕೊಂಚ ಕಡಿಮೆಯಿದ್ದರೂ ಬೆಲೆ ಮಾತ್ರ ಏರಿಕೆಯಾಗಿದೆ.ಗರಿಷ್ಠ 8,000 ರೂ. ಸನಿಹಕ್ಕೆ ಇತ್ತೀಚೆಗೆ ಮುಟ್ಟಿದ್ದು, ಈಗ ಮಾರುಕಟ್ಟೆಯಲ್ಲಿ 7,000ದಿಂದ 7,500 ರೂ. ರವರೆಗೂ ಬೆಲೆ ಸಿಗುತ್ತಿದೆ. ಈ ಮೂಲಕ ಕೇಂದ್ರ ನೀಡಿದ್ದ ಬೆಂಬಲ ಬೆಲೆಗಿಂತ ಮಾರುಕಟ್ಟೆ ದರ 2,000 ರೂ. ಹೆಚ್ಚಿದೆ.