ಹೊರ ದೇಶಗಳಿಂದ ಆಗುತ್ತಿದ್ದ ಅಡಿಕೆ ಆಮದು ದರವನ್ನು ₹100 ಹೆಚ್ಚಿಸಿದ ಕೇಂದ್ರ ಸರ್ಕಾರ

ಹೊರ ದೇಶಗಳಿಂದ ಆಗುತ್ತಿದ್ದ ಅಡಿಕೆ ಆಮದು ದರವನ್ನು ₹100 ಹೆಚ್ಚಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಹೊರ ದೇಶಗಳಿಂದ ಆಗುತ್ತಿದ್ದ ಆಮದು ದರವನ್ನು ₹100 ಹೆಚ್ಚಿಸಿದೆ. ಈವರೆಗೆ ಕನಿಷ್ಠ ಆಮದು ದರ ₹251 ಇದ್ದರೆ ಇನ್ನು ಮುಂದೆ ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡುವ ಮೂಲಕ ಆಮದು ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಟ್ವಿಟ್‌ ಮಾಡಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ, ಟ್ವಿಟ್‌ ಮಾಡಿದ್ದಾರೆ.

ಇದೇ ವೇಳೆ ಅವರು ಅಡಿಕೆ ಬೆಳೆಗಾರರ ಹಿತ ಕಾಯುವ ಕೇಂದ್ರದ ಈ ನಿರ್ಧಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಅಂಥ ತಿಳಿಸಿದ್ದಾರೆ.

ಹಿಂದಿನ ₹251 ಕನಿಷ್ಠ ಆಮದು ದರವನ್ನು ₹100 ಗಳಿಂದ, ₹351ಕ್ಕೆ ಹೆಚ್ಚಿಸಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ₹351 ಕ್ಕಿಂತ ಹೆಚ್ಚಿನ ಬೆಲೆ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಹೊರದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರಿಗೆ ಶಾಪವಾಗಿ ಪರಿಣಾಮಿಸಿತ್ತು.