ಭೂ ಸ್ವಾಧೀನ' ವಿರೋಧಿಸಿ ಪ್ರತಿಭಟನೆ : ರೊಚ್ಚಿಗೆದ್ದ ರೈತರಿಂದ ಸುವರ್ಣಸೌಧಕ್ಕೆ ನುಗ್ಗಲು ಯತ್ನ

ಭೂ ಸ್ವಾಧೀನ' ವಿರೋಧಿಸಿ ಪ್ರತಿಭಟನೆ : ರೊಚ್ಚಿಗೆದ್ದ ರೈತರಿಂದ ಸುವರ್ಣಸೌಧಕ್ಕೆ ನುಗ್ಗಲು ಯತ್ನ

ಬೆಳಗಾವಿ : 220 ಎಕರೆ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ ಘಟನೆ ಇಂದು ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರು ಹಲಕುರ್ಕಿ 220 ಎಕರೆ ಭೂ ಸ್ವಾಧೀನ ವಿರೋಧಿಸಿ ಬಸ್ತಿವಾಡ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಮುರುಗೇಶ್ ನಿರಾಣಿ ಬಾರದ ಹಿನ್ನೆಲೆ ಚ್ಚಿಗೆದ್ದ ರೈತರುಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ರೈತರನ್ನು ತಡೆದ ಪೊಲೀಸರು ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಹಾಗೂ ರೈತರ ನಡುವೆ ತಳ್ಳಾಟ- ಮಾತಿಕ ಚಕಮಕಿ ನಡೆದಿದೆ. ಸ್ಥಳದಲ್ಲಿ ರೈತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಇನ್ನೊಂದೆಡೆ, ಸುವರ್ಣಸೌಧಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದಕ್ಕೆ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ಸುವರ್ಣಸೌಧ ಪ್ರವೇಶಕ್ಕೆ ಅವಕಾಶ ನೀಡದ ಕಾರಣಕ್ಕೆ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಸುವರ್ಣಸೌಧ ನುಗ್ಗಲು ವಕೀಲರು ಯತ್ನಿಸಿದ್ದಾರೆ. ಇವರನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಮೀಷನರ್ ಬೋರ ಲಿಂಗಯ್ಯ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೇ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ದಿಕ್ಕಾರ ಘೋಷಣೆ ಕೂಗಿದ ವಕೀಲರು ಸುವರ್ಣಸೌಧದ ಒಳಗೆ ಪ್ರವೇಶಿಸಲು ಪಟ್ಟು ಹಿಡಿದಿದ್ದಾರೆ. ವಕೀಲರ ಸಂರಕ್ಷಣೆ ಕಾಯಿದೆ ಜಾರಿ ವಿಧೇಯಕ್ಕೆ ಅಂಗೀಕಾರ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.