ಸಮರ್ಥ್ ಅಜೇಯ ಶತಕ: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ-ಸರ್ವಿಸಸ್ ರಣಜಿ ಪಂದ್ಯ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಸರ್ವಿಸಸ್ ನಡುವಣ ರಣಜಿ ಟ್ರೋಫಿಯ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಸಮರ್ಥ್ ಆರ್ ಅವರ ಅಜೇಯ 119 ರನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಅವರ ಆಕರ್ಷಕ 73 ರನ್ಗಳ ನೆರವಿನಿಂದ ಕರ್ನಾಟಕ ತಂಡ ಎದುರಾಳಿಗೆ ಗೆಲ್ಲಲು 293 ರನ್ಗಳ ಟಾರ್ಗೆಟ್ ನೀಡಿತು. ಆದರೆ, ಅಂತಿಮ ದಿನದಾಟದ ಅಂತ್ಯಕ್ಕೆ ಸರ್ವಿಸಸ್ ತಂಡ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದ ಪರಿಣಾಮ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.