ಅಮಿತ್ ಶಾ ಜೊತೆ ಸಿಎಂ ಮತ್ತೊಂದು ಸುತ್ತಿನ ಮಾತುಕತೆ; ಸಂಪುಟ ವಿಸ್ತರಣೆ ಪ್ರಸ್ತಾವ

ಅಮಿತ್ ಶಾ ಜೊತೆ ಸಿಎಂ ಮತ್ತೊಂದು ಸುತ್ತಿನ ಮಾತುಕತೆ; ಸಂಪುಟ ವಿಸ್ತರಣೆ ಪ್ರಸ್ತಾವ

ಬೆಳಗಾವಿ ಗಡಿ ವಿಚಾರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ವಿದ್ಯಮಾನ ಸೇರಿದಂತೆ ಹಲವು ವಿಷಯಗಳ ಕುರಿತು ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ತೊಡಗಿದ್ದಾರೆ. ಜೊತೆಗೆ ಸಚಿವರಾದ ಅರಗ ಜ್ಞಾನೇಂದ್ರ, ಕಾರಜೋಳ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗಿದ್ದು, ಸಂಪುಟ ವಿಸ್ತರಣೆ ಕುರಿತು ಪ್ರಸ್ತಾವಿಸಿದ್ದಾರೆ. ಈ ಕುರಿತು ಮಾತನಾಡಲು ಮತ್ತೊಂದು ಸಭೆ ನಿಗದಿಪಡಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ.