ಸದ್ಯವೇ ವಂದೇ ಭಾರತ್ ರೈಲು ವೇಗ ಮಿತಿ ಹೆಚ್ಚಳ

ಬೆಂಗಳೂರು: ದಕ್ಷಿಣ ಭಾರತದ ಮೊಟ್ಟ ಮೊದಲ ಮೈಸೂರು - ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಗರಿಷ್ಠ 180 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯ ಇದ್ದರೂ ಇದುವರೆಗೆ ವೇಗ ಮಿತಿ 100 ಕಿ.ಮೀ. ದಾಟಿಲ್ಲ. ಇದೀಗ ಬೆಂಗಳೂರು -ಮೈಸೂರು ನಡುವಿನ ಹಳಿಗಳನ್ನು 110 ಕಿಮೀ ವೇಗವನ್ನು ತಡೆದುಕೊಳ್ಳುವಂತೆ ನವೀಕರಿಸುವ ಸಾಧ್ಯತೆಗಳನ್ನು ರೈಲ್ವೆ ಇಲಾಖೆ ಪರಿಶೀಲಿಸುತ್ತಿದೆ.
ಎರಡು ನಗರಗಳ ನಡುವೆ ರೈಲುಗಳು 125 ಕ್ಕೂ ಹೆಚ್ಚು ತಿರುವುಗಳಿವೆ. ಅವುಗಳಲ್ಲಿ ಹಲವು ದೀರ್ಘ ತಿರುವುಗಳಾಗಿವೆ. ನಮ್ಮ ತಾಂತ್ರಿಕ ತಂಡವು ವರದಿಯನ್ನು ಸಲ್ಲಿಸಿದ ನಂತರ ವೇಗ ಮಿತಿ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದವರು ತಿಳಿಸಿದ್ದಾರೆ. ಜೋಲಾರ್ ಪೇಟೆ ಮತ್ತು ಬೆಂಗಳೂರು ನಡುವೆ ಈಗಾಗಲೇ 110 ಕಿಮೀ ವೇಗದಲ್ಲಿ ರೈಲುಗಳು ಓಡುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಆ ಹಳಿಗಳು ಗಂಟೆಗೆ 130 ಕಿಮೀ ವೇಗವನ್ನು ತಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.ಯಾಣಿಕರಿಂದ ಉತ್ತಮ ಸ್ಪಂದನೆ
ನ.12ರಿಂದ ಡಿ.29ರ ತನಕದ 48 ದಿನಗಳಲ್ಲಿ ವಂದೇ ಭಾರತ್ ರೈಲಿನಲ್ಲಿ ಒಟ್ಟು 1,41,127 ಜನರು ಪ್ರಯಾಣಿಸಿದ್ದಾರೆ. ಆ ಮೂಲಕ ನೈಋತ್ಯ ರೈಲ್ವೆಯು ಈ ಹೊಸ ರೈಲು ಸೇವೆಯಿಂದ 10.21 ಕೋಟಿ ರೂ. ಆದಾಯವನ್ನು ಸಂಗ್ರಹಿಸಿದೆ.
ಕಳೆದ ನವೆಂಬರ್ 11ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದ ರು. ಇದಾದ ಬಳಿಕ ಬೆಂಗಳೂರು ಹಾಗೂ ಮೈಸೂರು ನಡುವೆ ಒಟ್ಟು 47,742 ಜನರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಚೆನ್ನೈ ನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಚೆನ್ನೈ ಗೆ ನೇರವಾಗಿ ತೆರಳುವ ಪ್ಯಾ ಸೆಂಜರ್ ಸಂಖ್ಯೆ ಕೇವಲ 15,452 ಆಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
'ಕೆಲಸದ ದಿನಗಳಲ್ಲಿ ಶೇ.65 ರಿಂದ 70ರಷ್ಟು ರೈಲಿನ ಸೀಟುಗಳು ತುಂಬಿರುತ್ತದೆ. ಆದರೆ ವಾರಾಂತ್ಯ ದಲ್ಲಿ ಈ ರೈಲಿನ ಸೀಟುಗಳು ಪೂರ್ತಿ ಭರ್ತಿಯಾಗಿರುತ್ತದೆ. ಪ್ರಯಾಣಿಕರಿಂದಲೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಗೆ ಉತ್ತಮ ಸ್ಪಂ ದನೆ ದೊರೆತಿದೆ' ಎನ್ನ ತ್ತಾರೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚು ವರಿ ವಿಭಾಗೀಯ ರೈಲ್ವೆ ವ್ಯ ವಸ್ಥಾಪಕಿ ಕುಸುಮ.