ಬ್ಲಾಕ್​ ಫಂಗಸ್​ ಸೋಂಕಿತರ ಚಿಕಿತ್ಸೆಗೆ ಔಷಧಿ ಅಭಾವವಿದೆ: ಡಿಸಿಎಂ ಲಕ್ಷ್ಮಣ ಸವದಿ

ಡಿಸಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಕೊರೊನಾ ನಿಯಂತ್ರಣದ ಜವಾಬ್ದಾರಿ ನೀಡಿದ್ದಾರೆ. ಪ್ರಧಾನಿ ಮೋದಿ ಸಂವಾದದ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಪ್ರಧಾನಿ ಮೋದಿ ನೀಡಿದ ಎಲ್ಲಾ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದ್ರು. ಕೊರೊನಾ ನಿಯಂತ್ರಣಕ್ಕಾಗಿ ರಾಯಚೂರಿನಲ್ಲಿ ಕಠಿಣ ಲಾಕ್​ಡೌನ್​ನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದೇವೆ. ಮೂರು ದಿನ ಕಠಿಣ ಲಾಕ್​ಡೌನ್​ ಹಾಗೂ ಒಂದು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರಲಿದೆ. ರಾಜ್ಯದಲ್ಲಿ ಲಾಕ್​ಡೌನ್​ ಕುರಿತಂತೆ ಮುಂದೆ ಬರುವ ಆದೇಶವನ್ನ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ರು. ಇದೇ ವೇಳೆ ರಾಯಚೂರು ಜಿಲ್ಲೆಯಲ್ಲಿ ಬ್ಲಾಕ್​ ಫಂಗಸ್​ ಸೋಂಕು ವಿಚಾರವಾಗಿಯೂ ಮಾತನಾಡಿದ ಅವ್ರು, ಬ್ಲಾಕ್​ ಫಂಗಸ್​ ಸೋಂಕಿತರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಹಾಗೂ ಹೈದರಾಬಾದ್​ಗೆ ರವಾನೆ ಮಾಡಲಾಗ್ತಿದೆ. ಐವರು ಸೋಂಕಿತರಲ್ಲಿ ನಾಲ್ವರನ್ನ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಒಬ್ಬರಿಗೆ ಓಪೆಕ್​ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಜಿಲ್ಲೆಯಲ್ಲಿ ಬ್ಲಾಕ್​ ಫಂಗಸ್​ ಔಷಧಿ ಕೊರತೆಯಿದೆ. ಔಷಧಿ ಸರಬರಾಜಿಗೆ ಆರೋಗ್ಯ ಸಚಿವರಿಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ರು.

ಬ್ಲಾಕ್​ ಫಂಗಸ್​ ಸೋಂಕಿತರ ಚಿಕಿತ್ಸೆಗೆ ಔಷಧಿ ಅಭಾವವಿದೆ: ಡಿಸಿಎಂ ಲಕ್ಷ್ಮಣ ಸವದಿ