ನನಗೆ ಬರೀ ರಿಸರ್ವ್ ಬ್ಯಾಂಕ್ ಕಾಯಿನ್ ಮಾತ್ರ ಗೊತ್ತು ಶಾಸಕ ಬಂಡೆಪ್ಪ ಖಾಶೆಂಪುರ್
ಯಾವ ಕಾಯಿನ್ ಇದೆಯೋ ನನ್ನಗೆ ಗೊತ್ತಿಲ್ಲ. ನನಗೆ ಬರೀ ರಿಸರ್ವ್ ಬ್ಯಾಂಕ್ ಕಾಯಿನ್ ಮಾತ್ರ ಗೊತ್ತು ಎಂದು ಬಿಟ್ ಕಾಯಿನ್ ಪ್ರಕರಣ ಬಗ್ಗೆ ಬೀದರ್ ನಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ಹಾರಿಕೆಯ ಉತ್ತರ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಸರ್ಕಾರ ಮುಕ್ತವಾಗಿ ತನಿಖೆ ಮಾಡಲಿ. ಆರೋಪ ಬಂದಾಗ ಸರ್ಕಾರದಲ್ಲಿದ್ದವರು ಮುಕ್ತವಾದ ತನಿಖೆ ಮಾಡಬೇಕು. ಇಬ್ಬರು ಆರೋಪದ ಬಗ್ಗೆ ಸ್ಪಷ್ಟನೆ ನೀಡಬೇಕು. ಎಲ್ಲರನ್ನೂ ಸೇರಿಸಿ ತನಿಖೆ ಮಾಡಿ. ಸಿಎಂ ಯಾವುದಾದ್ರು ತನಿಖಾ ಸಂಸ್ಥೆಗೆ ಈ ಪ್ರಕರಣದ ತನಿಖೆ ವಹಿಸಲಿ ಎಂದು ಆಗ್ರಹಿಸಿದರು.