ಕೆರೆ ಏರಿ ಒಡೆದು ಜಮೀನಿಗೆ ನುಗ್ಗಿದ ನೀರು; ನೂರಾರು ಎಕರೆ ಜಲಾವೃತ
ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೆಚ್. ತಿಮ್ಮಾಪುರ, ಕುಕ್ಕಸಮುದ್ರ ಕೆರೆ ಏರಿ ಒಡೆದು ಜಮೀನಿಗೆ ನೀರು ನುಗ್ಗಿದೆ. ಪೈಪ್ ಲೈನ್ ಮೂಲಕ ನೀರು ಹರಿಸುವ ಬದಲು ಅಧಿಕಾರಿಗಳು ಹಳ್ಳಕ್ಕೆ ನೀರು ಬಿಟ್ಟ ಕಾರಣ ಎಚ್. ತಿಮ್ಮಾಪುರ, ಹಡಗಲು, ಕಳ್ಳಿಹೊಸಳ್ಳಿ ಗ್ರಾಮಗಳ ನೂರಾರು ಎಕರೆಯಲ್ಲಿ ಬೆಳೆದಿದ್ದ ರಾಗಿ, ಮೆಜ್ಜೆಜೋಳ, ಬಾಳೆ, ಅಡಿಕೆ, ತೆಂಗು ಜಲಾವೃತವಾಗಿದೆ.