ಗಾಯದ ಸಮಸ್ಯೆ; ತಂಡದಿಂದ ಮೂವರು ಆಟಗಾರರು ಹೊರಕ್ಕೆ

ಬಾಂಗ್ಲಾ ಎದುರಿನ ಸರಣಿ ಕಳೆದುಕೊಂಡಿರುವ ಟೀಂ ಇಂಡಿಯಾಗೆ ಈಗ ಮತ್ತೊಂದು ಆಘಾತ ಉಂಟಾಗಿದೆ. ಭಾರತ ತಂಡದಲ್ಲಿ ಗಾಯದ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಈಗ ಮತ್ತೆ ಮೂವರು ಆಟಗಾರರು ಹೊರಬಿದ್ದಿದ್ದಾರೆ. ಸರಣಿ ಆರಂಭಕ್ಕೂ ಮುನ್ನ ರಿಷಭ್ ಪಂತ್ & ಶಮಿ ಗಾಯಗೊಂಡಿದ್ದರು. ಈಗ 3ನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ, ದೀಪಕ್ ಚಹರ್ & ಕುಲ್ದೀಪ್ ಸೇನ್ ಅಲಭ್ಯರಾಗಲಿದ್ದಾರೆ ಎಂದು ಕೋಚ್ ರಾಹುಲ್ ಡ್ರಾವಿಡ್ ತಿಳಿಸಿದ್ದಾರೆ. ಈ ಸುದ್ದಿ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.