ಕೊಪ್ಪಳದಲ್ಲಿ ಕತ್ತೆ ಹಾಲಿಗೆ ಬಂತು ಡಿಮಾಂಡ್ ಪ್ಪೋ ಡಿಮಾಂಡ್

ಸಾಮಾನ್ಯವಾಗಿ ಕತ್ತೆಯನ್ನು ಎಲ್ಲರೂ ಬಹಳ ತುಚ್ಚ ಭಾವನೆಯಿಂದ ನೋಡತಾರೆ. ಅಷ್ಟೇ ಅಲ್ಲ ಕತ್ತೆಯನ್ನು ಬುದ್ದಿ ಇಲ್ಲದ ಪ್ರಾಣಿ ಅಂತ ಬಿಂಬಿಸತಾರೆ ಆದರೆ ಅದೇ ಕತ್ತೆ ಇವತ್ತು ಮಕ್ಕಳು ಹಾಗೂ ವೃದ್ಧರಿಗೆ ಜೀವ ರಕ್ಷಕವಾಗಿದೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ. ಹೀಗೆ ಸರದಿ ಸಾಲಿನಲ್ಲಿ ನಿಂತು ಜನ ಮುಗಿ ಬೀಳೋತ್ತಿರುವುದು ಏನಕ್ಕೆ ಗೊತ್ತ, ಅದು ಕತ್ತೆ ಹಾಲಿಗಾಗಿ. ಕತ್ತೆ ಹಾಲಿನ ಬಳಕೆ ವಿಚಾರ ಇತ್ತೀಚಿಗಷ್ಟೇ ಬಂದಿದ್ದಲ್ಲ. ವಾಸ್ತವವಾಗಿ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಯುರ್ವೇದಲ್ಲಿ ಕತ್ತೆ ಹಾಲಿನ ವಿಶೇಷ ಉಲ್ಲೇಖವಿದೆ. ಡೇಂಘಿ, ವೈರಲ್ ಇನ್ಫೆಕ್ಷನ್,ಮೈ ಕೈಯಿ ನೋವು, ಜ್ವರದಿಂದ ಬಳಲುತ್ತಿರುವವರಿಗೆ ಕತ್ತೆ ಹಾಲು ರಾಮಬಾಣವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸೌಂದರ್ಯ ವೃದ್ದಿ, ಆಹಾರ ಉತ್ಪನ್ನಗಳಲ್ಲಿ ಕತ್ತೆ ಹಾಲು ಬಳಕೆ ಮಾಡುತ್ತಾರೆ. ಕೆಮ್ಮು, ಕಮಾಲೆ ಅಸ್ತಮಾ, ಗ್ಯಾಸ್ಟ್ರಿಕ್ ಗೆ ಕತ್ತೆ ಹಾಲು ಔಷಧಿಯಾಗಿದೆ ಅಂತ ಭಾವಿಸಿರುವ ಪಾಲಕರು ಲೋಟಕ್ಕೆ 50 ರಿಂದ 100 ರೂಪಾಯಿ ಕೊಟ್ಟು ಮಕ್ಕಳಿಗೆ ಕತ್ತೆ ಹಾಲು ಕುಡಿಸತಾಯಿದ್ದಾರೆ. ಒಟ್ಟಾರೆ ಕೊಪ್ಪಳ ದಲ್ಲಿ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್.