ನಮ್ಮ ಬಿಟ್ಟು ಹೊಗಬೇಡಿ ಸರ್... ಎಂದು ಬಿಕ್ಕಿಬಿಕ್ಕಿ ರೋಧಿಸಿದ ವಿದ್ಯಾರ್ಥಿಗಳು|Koppal|

ನೆಚ್ಚಿನ ಶಿಕ್ಷಕನ ವರ್ಗಾವಣೆ ಆಗಿದ್ದಕ್ಕೆ ನೂರಾರು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ರೋಧಿಸಿದ್ದಾರೆ. ಶಾಲೆ ಬಿಟ್ಟು ಹೋಗಬೇಡಿ ಎಂದು ಶಿಕ್ಷಕನಿಗೆ ಅಡ್ಡಗಟ್ಟಿ ಗೋಳಾಡಿ ಅತ್ತ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಹಿಂದಿ ಭಾμÉ ಬೋಧನೆ ಮಾಡುತ್ತಿದ್ದ ಶಿಕ್ಷಕ ಈಶಪ್ಪ ಅವರು ಕಳೆದ 13 ವರ್ಷದಿಂದ ಹಿರೇಖೇಡ ಗ್ರಾಮದ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಗಂಗಾವತಿ ತಾಲೂಕು ಚಳ್ಳೂರು ಗ್ರಾಮಕ್ಕೆ ವರ್ಗವಣೆ ಆಗಿದ್ದಾರೆ. ಈ ಹಿನ್ನೆಲೆ ಶಿಕ್ಷಕ ಈಶಪ್ಪ ಅವರಿಗೆ ಶಾಲೆಯಿಂದ ಬೋಳ್ಕೊಡುವ ಕಾರ್ಯಕ್ರಮ ನಡೆಸಿ, ಅಭಿನಂದಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕ ಈಶಪ್ಪ ಅವರನ್ನು ಸುತ್ತುವರೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಶಿಕ್ಷಕ ಈಶಪ್ಪ ಮತ್ತು ಇಡೀ ಶಾಲೆಯ ಸಿಬ್ಬಂದಿ ಭಾವುಕರಾಗಿದ್ದಾರೆ.