ಪಿಎಸ್‌ಐ ಅಕ್ರಮ ಬೆಂಗಳೂರು ಸೇರಿ ೩೩ ಕಡೆ ಸಿಬಿಐ ದಾಳಿ

ನವದೆಹಲಿ, ಸೆ.೧೩- ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಕುರಿತಂತೆ ಕೇಂದ್ರೀಯ ತನಿಖಾ ದಳ (ಸಿಬಿಐ)ಬೆಂಗಳೂರು ಸೇರಿದಂತೆ ದೇಶದ ೩೩ ಕಡೆಗಳಲ್ಲಿ ದಾಳಿ ನಡೆಸಿದೆ.
ಬೆಂಗಳೂರು, ಘಾಜಿಯಾಬಾದ್, ದೆಹಲಿ, ರೇವಾರಿ, ಜಮ್ಮು-ಕಾಶ್ಮೀರ, ಕರ್ನಾಲ್ ಮತ್ತು ಮಹೇಂದ್ರಘಡದಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಸೇವಾ ಆಯ್ಕೆ ಮಂಡಳಿಯ ಮಾಜಿ ಅಧ್ಯಕ್ಷ ಖಾಲಿತ್‌ಜಹಂಗೀರ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಕಂಟ್ರೋಲರ್, ಅಶೋಕ್‌ಕುಮಾರ್ ಮಾನ್ ಅವರ ನಿವಾಸಗಳ ಮೇಲೂ ದಾಳಿ ನಡೆಸಿರುವ ಸಿಬಿಐ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆ. ೫ ರಂದು ನಡೆದಿದ್ದ ದಾಳಿಯ ವೇಳೆ ಸಿಬಿಐ ಮಹತ್ವದ ದಾಖಲೆಗಳು, ಉಪಕರಣ, ಉತ್ತರ ಪತ್ರಿಕೆಗಳು, ಅರ್ಜಿಗಳು ಮತ್ತು ಓಎಂಆರ್ ಫೈಲ್‌ಗಳನ್ನು ವಶಪಡಿಸಿಕೊಂಡಿದ್ದರು. ಇದಲ್ಲದೆ ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ಆರೋಪಿ ಸಬ್‌ಇನ್ಸ್‌ಪೆಕ್ಟರ್ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ತನಿಖೆಯನ್ನು ಚುರುಕುಗೊಳಿಸಿದೆ.