ಸದನಕ್ಕೆ ಇಂದು ಕಾಂಗ್ರೆಸ್ ಗಡಿ ವಿವಾದದ ಜೊತೆಗೆ ಎಂಟ್ರಿ.. ಮಹಾರಾಷ್ಟ್ರದ ವಿರುದ್ಧ ಖಂಡನಾ ನಿರ್ಣಯ

ಸದನಕ್ಕೆ ಇಂದು ಕಾಂಗ್ರೆಸ್ ಗಡಿ ವಿವಾದದ ಜೊತೆಗೆ ಎಂಟ್ರಿ.. ಮಹಾರಾಷ್ಟ್ರದ ವಿರುದ್ಧ ಖಂಡನಾ ನಿರ್ಣಯ

ಳಿಗಾಲ ಅಧಿವೇಶನ ಮೂರನೇ ದಿನಕ್ಕೆ ಕಾಲಿಡಲಿದೆ.. ಚುನಾವಣಾ ಹೊಸ್ತಿಲಿನಲ್ಲಿ ಆಡಳಿತರೂಢ ಕಮಲ ಪಾಳಯವನ್ನ ಕಟ್ಟಿ ಹಾಕಲು ಕಾಂಗ್ರೆಸ್​ ಸಜ್ಜಾಗಿದೆ. ಕೇಸರಿ ಪಡೆಯ ಮಾಹಾ ಗಡಿ ಲೆಕ್ಕಾಚಾರವನ್ನ ಬುಡಮೇಲು ಮಾಡಲು ವಿಪಕ್ಷಗಳು ಪ್ರತಿತಂತ್ರ ಅಸ್ತ್ರವನ್ನ ರೂಪಿಸಿವೆ ಈ ಮೂಲಕ ಗಡಿ ಗಲಾಟೆ ಇಂದು ಸದನವನ್ನ ಬಿಸಿಯೇರಿಸಲಿದೆ.

ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಇಂದು ಮೂರನೇ ದಿನಕ್ಕೆ ಕಾಲಿಡಲಿದೆ. ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಕಾಂಗ್ರೆಸ್​ ಪಡೆ ಗಡಿ ವಿವಾದದ ಜೊತೆ ಸದನಕ್ಕೆ ಎಂಟ್ರಿಯಾಗಲಿದೆ. ನಿನ್ನೆ ಸಾವರ್ಕರ್​ ಪೋಟೋ. ಎಸ್​ಸಿ ಎಸ್​ಟಿ ವಿಚಾರವಾಗಿ ಯುದ್ಧಕ್ಕೆ ಇಳಿದಿದ್ದ ಕೈ ಸೇನೆ ಇಂದು ಬತ್ತಳಿಕೆಯಿಂದ ಗಡಿ ಗಲಾಟೆ ಅಸ್ತ್ರ ಪ್ರಯೋಗಿಸಲಿದೆ.. ಪುಂಡಾಟ ಪ್ರದರ್ಶಿಸುವ ಮಹಾ ಪುಂಡಾಟದ ಬಗ್ಗೆಯೂ ಮಾತಿನ ಕದನ ಏರ್ಪಡಲಿದೆ. ಮಾತ್ರವಲ್ಲದೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಇಂದು ಖಂಡನಾ ನಿರ್ಣಯ ಅಂಗೀಕಾರ ಮಾಡಲು ತೀರ್ಮಾನಿಸಲಾಗಿದೆ.

ಮಹಾರಾಷ್ಟ್ರದ ಗಡಿ ಕ್ಯಾತೆ ಬಗ್ಗೆ ಸದನದಲ್ಲಿ ಖಂಡನಾ ನಿರ್ಣಯ ಮಂಡನೆಗೆ ವಿಧಾನಸಭೆಯಲ್ಲಿ ನಿರ್ಧಾರಿಸಲಾಗಿದೆ. ಎಲ್ಲರೂ ಒಪ್ಪಿದ್ರೆ. ಎರಡು ಸದನದಲ್ಲಿ ಖಂಡನಾ ನಿರ್ಣಯ ಮಂಡನೆ ಮಾಡೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ.

ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಡೆಯ ವಿರುದ್ಧ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಯ್ಯ ಗುಡುಗಿದ್ರು. ಇದೀಗ ಡಬಲ್​ ಇಂಜಿನ್​ ಸರ್ಕಾರವಿದೆ. ಹೀಗಿರುವಾಗ ಸಮಸ್ಯೆ ಬಗೆಹರಿಸಬಹುದಿತ್ತು, ಕೇಂದ್ರ ಸರ್ಕಾರ ಮೌನವಾಗಿರದೇ ಅವರಿಗೆ ಬಾಯಿ ಮುಚ್ಚಿಕೊಂಡಿರಬೇಕು ಅಂತಾ ಹೇಳಬೇಕಿತ್ತು, ಪುಂಡಾಟಿಕೆ, ಗೂಂಡಾಗಿರಿ ಮಾಡೋದನ್ನು ನಿಲ್ಲಿಸಿ ಅಂತಾ ಹೇಳಬೇಕಿತ್ತು ಎಂದು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.