ಒಳ ಮೀಸಲಾತಿ ವಿರೋಧಿಸಿ ಲಂಬಾಣಿ ಯುವಕ ಏಕಾಂಗಿ ಧರಣಿ

ಒಳ ಮೀಸಲಾತಿ ವಿರೋಧಿಸಿ ಲಂಬಾಣಿ ಯುವಕ ಏಕಾಂಗಿ ಧರಣಿ

ಹೂವಿನಹಡಗಲಿ (ವಿಜಯನಗರ): ಒಳ ಮೀಸಲಾತಿ ವರದಿ ಜಾರಿಗೊಳಿಸುವ ಸರ್ಕಾರದ ತೀರ್ಮಾನ ವಿರೋಧಿಸಿ ಲಂಬಾಣಿ ಯುವಕನೊಬ್ಬ ಪಟ್ಟಣದಲ್ಲಿ ಮಂಗಳವಾರ ಏಕಾಂಗಿಯಾಗಿ ಧರಣಿ ಆರಂಭಿಸಿದ್ದಾನೆ.

ತಾಲ್ಲೂಕಿನ ದಾಸರಹಳ್ಳಿ ತಾಂಡಾದ ಯುವಕ ಸೇವಾನಾಯ್ಕ ಎಂಬುವವರು ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಲ್ಲಿ ಸೇವಾಲಾಲ್ ಫೋಟೊ ಇರಿಸಿ ಧರಣಿ ಪ್ರಾರಂಭಿಸಿದ್ದಾರೆ.

ಸುಡು ಬಿಸಿಲು ಲೆಕ್ಕಿಸದೇ ಇಡೀ ದಿನ ಧರಣಿ ನಡೆಸಿ, ಒಳ ಮೀಸಲಾತಿ ವರ್ಗೀಕರಣ ಶಿಫಾರಸು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

'ಸರ್ಕಾರ ಕೂಡಲೇ ಮೀಸಲಾತಿ ವರ್ಗೀಕರಣ ಶಿಫಾರಸು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ತಾಂಡಾಗಳಲ್ಲಿ ಜಾಗೃತಿ ಮೂಡಿಸಿ ಮತದಾನ ಬಹಿಷ್ಕರಿಸಲು ತಿಳಿಸುತ್ತೇವೆ' ಎಂದು ಹೇಳಿದರು.

'ಸರ್ಕಾರದ ತೀರ್ಮಾನ ವಿರೋಧಿಸಿ ಏಕಾಂಗಿಯಾಗಿ ಪ್ರತಿಭಟನೆ ಆರಂಭಿಸಿದ್ದೇನೆ. ನಾಳೆಯಿಂದ ಸಮುದಾಯದ ಇನ್ನಷ್ಟು ಜನರು ನನ್ನೊಂದಿಗೆ ಸೇರಲಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ' ಎಂದರು.