ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಾತೋರಾತ್ರಿ ರೌಡಿಶಿಟರ್ ಮನೆಗಳ ಮೇಲೆ ದಾಳಿ
ಇತ್ತೀಚಿಗೆ ಬೆಂಗಳೂರಿನ ನೆಲಮಂಗಲದಲ್ಲಿ ಕ್ರೈಮ್ ರೇಟ್ ಹೆಚ್ಚಾದ ಹಿನ್ನಲೆಯಲ್ಲಿ ಧಿಡಿರಣೆ ರೌಡಿಶಿಟರ್ ಮನೆಗಳ ಮೇಲೆ ಕಾಖಿ ಪಡೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದೆ. ಬೆಂಗಳೂರು ಗ್ರಾಮಾಂತರ, ನೆಲಮಂಗಲ, ಮಾದನಾಯಕನಹಳ್ಳಿ, ದಾಬಸಪೇಟೆ ಮತ್ತು ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕುಖ್ಯಾತ ರೌಡಿಶಿಟರಗಳಾದ ಬೆತ್ತಣಗೆರೆ ಶಂಕರ್, ಬಂಡೆ ಮಂಜ್, ಕಡಬಗೆರೆ ಶ್ರೀನಿವಾಸ,ಬೆತ್ತಣಗೆರೆ ಮಂಜ್, ಮುನೇಗೌಡ್, ಬಂಡೆ ಮಂಜ್, ಗಣೇಶಗುಡಿ ರಂಗ, ಸೇರಿದಂತೆ 150 ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದು ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ