ಈಜಿಪ್ಟ್‌ನಲ್ಲಿ ನಡೆಯಲಿರುವ ಫ್ಯಾಶನ್ ಶೋಗೆ ಧಾರವಾಡದ ಯುವತಿ ಆಯ್ಕೆ

ಈಜಿಪ್ಟ್‌ನಲ್ಲಿ ನಡೆಯಲಿರುವ ಫ್ಯಾಶನ್ ಶೋಗೆ ಧಾರವಾಡದ ಯುವತಿ ಆಯ್ಕೆ

ಧಾರವಾಡ: ಈಜಿಪ್ಟ್‌ನಲ್ಲಿ ನಡೆಯಲಿರುವ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಧಾರವಾಡ ಯುವತಿಯೊಬ್ಬರು ಭಾಗವಹಿಸಲಿದ್ದಾರೆ.

ನಗರದ ಏಕನಾಥ ಟಿಕಾರೆ ಹಾಗೂ ಶೈಲಾ ದಂಪತಿಯ ಹಿರಿಯ ಪುತ್ರಿಯಾಗಿರುವ ಖುಷಿ ಪಿಯುಸಿ ಓದುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಇದೇ ಡಿಸೆಂಬರ್ 10 ರಿಂದ 21 ರವರೆಗೆ ಈಜಿಪ್ಟ್ ದೇಶದ ಲುಕ್ಸಾನ್‍ನಲ್ಲಿ ನಡೆಯಲಿರುವ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಈ ಬಾರಿ ಭಾರತದಿಂದ ಖುಷಿ ಆಯ್ಕೆಯಾಗಿದ್ದಾರೆ. ಒಟ್ಟು 35 ದೇಶಗಳ ಸ್ಪರ್ಧಿಗಳು ಫ್ಯಾಶನ್ ಶೋನಲ್ಲಿ ಭಾಗವಹಿಸಲಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಇಂಟರ್ ನ್ಯಾಷನಲ್ ಆರ್ಗನೈಝೇಶನ್ ನಡೆಸಿದ್ದ ಸ್ಪರ್ಧೆಯಲ್ಲಿ ಖುಷಿ ಪ್ರಥಮ ಸ್ಥಾನ ಪಡೆದು ಈ ಹಂತಕ್ಕೆ ಏರಿದ್ದಾರೆ. ಈ ಸ್ಪರ್ಧೆಯಲ್ಲಿ ಫಿಟ್ ನೆಸ್ ರೌಂಡ್, ಟ್ಯಾಲೆಂಟ್ ರೌಂಡ್, ಇಕೋ ಡ್ರೆಸ್ ರೌಂಡ್ ಸೇರಿ ಅನೇಕ ಸುತ್ತುಗಳಿವೆ. ಜೊತೆಗೆ ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡ್ರೆಸ್ ಧರಿಸಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿದ್ದು ಪ್ರತಿಯೊಬ್ಬ ಸ್ಪರ್ಧಿಯೂ ಪರಿಸರಕ್ಕೆ ಸಂಬಂಧಿಸಿದ ಒಂದೊಂದು ವಿಷಯ ವಸ್ತುವನ್ನು ಹೊಂದಿರಬೇಕು. ಈ ವಿಚಾರವಾಗಿ ಖುಷಿ ಸುಸ್ಥಿರ ಪರಿಸರ ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ