ಪೇಪರ್ ಗಣಪ ತಯಾರಿಸಿದ ಅರುಣ ಜಾಧವ್ಗೆ ಮೆಚ್ಚುಗೆ | Hubli |
ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಪಿಒಪಿ ಗಣಪತಿ ಮೂರ್ತಿ ಪ್ರತಿಷಾ್ಠಪನೆ ಗಣನೀಯವಾಗಿ ತಗ್ಗಿದ್ದು, ನಗರದ ಗೋಪನಕೊಪ್ಪದ ಗಣಪತಿ ಮೂರ್ತಿ ತಯಾರಕ ಅರುಣ ಜಾಧವ್ ಪೇಪರ್ ಗಣಪ ತಯಾರಿಸುವ ಮೂಲಕ ಮಾದರಿಯಾಗಿದ್ದಾರೆ. ಹು-ಧಾ ಮಹಾನಗರ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಮುನ್ನವೇ ಜಿಲ್ಲಾಡಳಿತ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಪರಿಸರ ಎಂಜಿನಿಯರ್ ವಿಭಾಗ ಹಾಗೂ ಗಣೇಶೋತ್ಸವ ಮಹಾಮಂಡಳ ಈ ಕುರಿತು ಜನಜಾಗೃತಿ ಮತ್ತು ಕಾರ್ಯಾಚರಣೆಗೆ ಪ್ರತಿಫಲ ದೊರೆತಂತಾಗಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಜಿಲ್ಲೆಗೆ ವಿವಿಧ ರಾಜ್ಯ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಂದ ಪಿಒಪಿ ಗಣಪತಿ ಮೂರ್ತಿಗಳ ಮಾರಾಟಕ್ಕೆ ಬರುವ ಸಾಮಾನ್ಯವಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರುಣ ಪೇಪರ್, ಅಂಟು, ಮತ್ತು ಪೆವಿಕ್ವಿಕ್ ಬಳಸಿಕೊಂಡು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರು ಮಾಡಿದ್ದಾರೆ. ಇನ್ನು ಪಿಒಪಿ ಗಣಪತಿ ಮೂರ್ತಿ ಪ್ರತಿಷಾ್ಠಪನೆ ಮಾಡಿದ ಮಂಡಳ ಹಾಗೂ ಕುಟುಂಬಗಳಿಗೆ ನೋಟಿಸ್ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸುತ್ತ್ತಿದೆ.