ರಾಜ್ಯಾಧ್ಯಂತ ಮುಂದಿನ 4 ದಿನ ಜೋರು ಮಳೆ - ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯಾಧ್ಯಂತ ಮುಂದಿನ 4 ದಿನ ಜೋರು ಮಳೆ - ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಮಳೆಯ  ಪ್ರಮಾಣ ಕಡಿಮೆಯಾಗಿ ರಾಜ್ಯದಲ್ಲಿ ಬೇಸಿಗೆ ಆರಂಭಗೊಂಡಿತ್ತು. ಈ ನಡುವೆಯೂ ಮುಂದಿನ ನಾಲ್ಕು ದಿನ ಜೋರು ಮಳೆ ರಾಜ್ಯಾಧ್ಯಂತ ಆಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಗಾಳಿಯ ಪರಿಣಾಮ ದಕ್ಷಿಣ ಕರ್ನಾಟಕ, ಕಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 4 ದಿನ ಜೋರಾಗಿ ಮಳೆ ಸುರಿಯಲಿದೆ ಎಂದಿದೆ.ಇನ್ನೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಭಾನುವಾರವೂ ದಕ್ಷಿಣ ಕನ್ನಡದ ಬೆಳ್ತಂಗಡಿ, ಉಡುಪಿಯ ಕಾರ್ಕಳ, ಹಾಸನದ ಶ್ರವಣ ಬೆಳಗೋಳ ಮತ್ತು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.