ಅಫ್ಘಾನಿಸ್ತಾನದಲ್ಲಿ ಗರ್ಭ ನಿರೋಧ ಗುಳಿಗೆ ಔಷಧಗಳ ಮಾರಾಟದ ಮೇಲೆ ನಿಷೇಧ

ಕಾಬೂಲ್: ಅಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲೀಬಾನ್ ಉಗ್ರರು ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ತೆಗೆದುಕೊಳ್ಳಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ.
ಇಂಥ ಔಷಧಗಳು, ಮಾತ್ರೆಗಳ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳು ಮುಸ್ಲಿಂ ಸಮುದಾಯವನ್ನು ನಿಯಂತ್ರಿಸಲು ರೂಪಿಸಿವೆ ಎಂದು ಉಗ್ರರ ಸರ್ಕಾರ ಹೊಸ ವಾದ ಮಂಡಿಸಿದೆ.
ಈ ಬಗ್ಗೆ “ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ. ಕಾಬೂಲ್‌ನಲ್ಲಿ ಇರುವ ಮಳಿಗೆಯ ಮಾಲೀಕ ನೀಡಿದ ಮಾಹಿತಿಯಂತೆ “ಇಬ್ಬರು ಬಂದೂಕುಧಾರಿಗಳು ಎರಡು ಬಾರಿ ನನ್ನ ಅಂಗಡಿಗೆ ಎಂದು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ಮಾರಾಟ ಮಾಡಲೇಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ನನ್ನ ಬಳಿ ಇರುವ ಔಷಧಗಳ ಸಂಗ್ರಹವನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾನೆ.