ಐಪಿಎಲ್ 2023: ಸಂಪೂರ್ಣ ವೇಳಾಪಟ್ಟಿ ಪ್ರಕಟ: ಮಾರ್ಚ್ 31ಕ್ಕೆ ಟೂರ್ನಿ ಆರಂಭ

ಐಪಿಎಲ್ 2023: ಸಂಪೂರ್ಣ ವೇಳಾಪಟ್ಟಿ ಪ್ರಕಟ: ಮಾರ್ಚ್ 31ಕ್ಕೆ ಟೂರ್ನಿ ಆರಂಭ

ಪಿಎಲ್ 2023ನೇ ಆವೃತ್ತಿಯ ವೇಳಾಪಟ್ಟಿ ಘೋಷಣೆಯಾಗಿದ್ದು ಮಹಾ ಸೆಣೆಸಾಟಕ್ಕೆ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 31ಕ್ಕೆ ಈ ಮೆಗಾ ಟೂರ್ನಿ ಆರಂಭವಾಗಲಿದ್ದು ಮೇ 28ಕ್ಕೆ ಟೂರ್ನಿಯ ಅಂತಿಮ ಪಂದ್ಯ ನಡೆಯಲಿದೆ. 52 ದಿನಗಳ ಕಾಲ ನಡೆಯಲಿರುವ ಈ ಮಹಾ ಕ್ರೀಡಾಕೂಟದಲ್ಲಿ 10 ತಂಡಗಳು ಪೈಪೋಟಿ ನಡೆಸಲಿದೆ.

ಇನ್ನು ಕುತೂಹಲಕಾರಿ ಅಂಶವೆಂದರೆ ಈ ಬಾರಿ ಕೂಡ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಆದರೆ ಈ ಬಾರಿ ತಮ್ಮ ಗುಂಪಿನಲ್ಲಿರುವ ತಂಡದ ಜೊತೆಗೆ ಒಂದು ಪಂದ್ಯದಲ್ಲಿ ಮಾತ್ರವೇ ಮುಖಾಮುಖಿಯಾಗಲಿದ್ದು ಮತ್ತೊಂದು ಗುಂಪಿನಲ್ಲಿರುವ ತಂಡಗಳ ಜೊತೆಗೆ ಎರಡಯು ಬಾರಿ ಮುಖಾಮುಖಿಯಾಗಲಿದೆ.

ಇನ್ನು ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.