ದೂರು ನೀಡಲು ಹೋದರೆ ಠಾಣೆ ಖಾಲಿ ಖಾಲಿ! ಮಹಾಲಕ್ಷ್ಮಿ ಲೇಔಟ್ ಪೊಲೀಸರ ವಿರುದ್ಧ ಗಂಭೀರ ಆರೋಪ.

ಬೆಂಗಳೂರು: ಪೊಲೀಸರ ಮೇಲೆ ಮತ್ತೆ ಗಂಭೀರ ಆರೋಪ ಕೇಳಿ ಬಂದಿದ್ದು ದೂರು ಕೊಡಲು ಹೋದಾಗ ಠಾಣೆಯಲ್ಲಿ ಒಬ್ಬ ಪೊಲೀಸರು ಇರಲಿಲ್ಲ ಎಂದು ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಅಳಲನ್ನು ತೋಡಿಕೊಂಡಿದ್ದಾನೆ.
ಇವೆರು ಸೈಕಲ್ ಕಳ್ಳತನವಾಗಿದ್ದಕ್ಕೆ ದೂರು ಕೊಡಲು 45 ನಿಮಿಷ ಕಾದಿರುದ್ದು ನಂತರ ಬಂದ ಪೊಲೀಸರು ಸೈಕಲ್ ಕಳ್ಳತನದ ದೂರು ಎಂದಾಗ ನನ್ನನ್ನು ನೋಡಿ ನಕ್ಕಿದ್ದಾರೆ.
ಇವರು ಮಹಾಲಕ್ಷ್ಮಿ ಲೇಔಟ್ ಪೊಲೀಸರ ಮೇಲೆ ಆರೋಪ ಮಾಡಿದ್ದು ಈ ಬಗ್ಗೆ ಬರೆದು ಬೆಂಗಳೂರು ಸಿಟಿ ಪೊಲೀಸ್ಗೆ ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ್ದಾರೆ.