ರೈತರ ಕಣ್ಣಿರೊರೆಸಲು ಮುಂದಾದ ಕೃಷಿ ವಿವಿ ಕುಲಪತಿ ಬಸವರಾಜಪ್ಪ
ರೈತ ದೇಶದ ಬೆನ್ನೆಲುಬು ಅಂತಾರೆ. ಆದರೆ ರೈತರ ಆರ್ಥಿಕ ಸಂಕಟ ಮತ್ತು ಅವರ ಕುಟುಂಬದ ಆದಾಯವನ್ನು ಸುಸ್ಥಿರಗೊಳಿಸುವಲ್ಲಿ ರಾಜ್ಯ ಕೃಷಿ ಇಲಾಖೆಯ ಪ್ರಯತ್ನ ಫಲಪ್ರದವಾಗಿಲ್ಲ . ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ರೈತರ ಸಂಕಷ್ಟ ಅರಿತು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕುಲಪತಿಗಳ ನಡೆ ರೈತರ ಕಡೆ ಎಂಬ ವಿನೂತನ ಯೋಜನೆ ಜಾರಿ ಮಾಡುವುದರ ಮೂಲಕ ಒಂದು ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ. ಬನ್ನಿ ಹಾಗಾದರೆ ಅವರು ಯಾರು ಅಂತ ತೋರಿಸ್ತೀವಿ.
ಇವರು ಡಾ. ಬಸವರಾಜಪ್ಪ ಸದ್ಯ ಧಾರವಾಡ ಕೃಷಿ ವಿವಿಯ ಪ್ರಭಾರಿ ಕುಲಪತಿಗಳು. ಸೌಮ್ಯ ಸ್ವಭಾವದ ವ್ಯಕ್ತಿ. ಆದರೆ ರೈತಾಪಿ ಕುಟುಂಬದಿಂದ ಬಂದಂತಹ ಇವರಲ್ಲಿ ಅಪಾರ ಕೃಷಿ ಭಂಡಾರ ಅಡಗಿದೆ. ವಿವಿಯ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಕೂಡವಿದೆ.
ಕೋವಿಡ್ ಮಹಾಮಾರಿಯಿಂದ ಕಳೆದ ಎರಡು ವರ್ಷಗಳಿಂದ ರೈತ ಜಾತ್ರೆ ಎಂದೇ ಕರೆಯಲ್ಪಡುವ ಕೃಷಿ ಮೇಳ ಆಯೋಜಿಸಲು ಆಗಿರಲಿಲ್ಲ. ಅಷ್ಟೇ ಅಲ್ಲ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ ಮತ್ತು ವಿಜ್ಞಾನ - ತಂತ್ರಜ್ಞಾನ ರೈತರ ಜಮೀನಿಗೆ ಮುಟ್ಟುತ್ತಿಲ್ಲ ಎಂಬ ಗಂಭೀರ ಸ್ವರೂಪದ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಕುಲಪತಿಗಳಾದ ಬಸವರಾಜಪ್ಪ ಅವರು ನೇರವಾಗಿ ಅನ್ನದಾತರ ಮನೆ ಬಾಗಿಲೆಗೆ ಹೋಗಲು ಇಂತಹ ಒಂದು ಐತಿಹಾಸಿಕ ನಿರ್ಣಯ ಕೈಗೊಂಡು ಚಾಲನೆ ಕೂಡ ನೀಡಿದ್ದಾರೆ. ಪ್ರಾಯೋಗಿಕವಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮ ಹಾಗೂ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ನಂದೀಕೇಶ್ವರ ಗ್ರಾಮಗಳಿಗೆ ಭೇಟಿ ನೀಡಿ ಯಶಸ್ವಿಯಾಗಿ ಪೂರೈಸಿದ್ದಾರೆ. ಇದಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.
ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿವಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜಿಲ್ಲೆಗಳಲ್ಲಿ ದಿನಕ್ಕೆ ಒಂದು ತಾಲೂಕಿನ 10 ಕ್ಷೇತ್ರಗಳಿಗೆ ಭೇಟಿ ನೀಡಿ ರೈತರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ಸೂಚಿಸಲಿದ್ದಾರೆ.
ಇವರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆಗಳು ಕೂಡ ಸಾಥ್ ನೀಡಲಿವೆ.
ಬೈಟ್ ಬಸವರಾಜಪ್ಪ
ಕೃಷಿ ವಿವಿ ಕುಲಪತಿಗಳು ಧಾರವಾಡ
ಈ ಯೋಜನೆಯ ಉದ್ದೇಶ
* ಕೂಲಿ ಕಾರ್ಮಿಕರ ಸಮಸ್ಯೆ ಆಲಿಸುವುದು
* ಕಳಪೆ ಬೀಜ ಹಾಗೂ ರಸ ಗೊಬ್ಬರಗಳ ಬಗ್ಗೆ ಮಾಹಿತಿ ನೀಡುವುದು
* ಅತಿವೃಷ್ಟಿ ಅನಾವೃಷ್ಟಿಯಿಂದ ಪಾರಾಗಲು ಪರ್ಯಾಯ ಬೆಳೆ ಕುರಿತು ಸಲಹೆ
* ಸಾವಯುವ ಹಾಗೂ ನೈಸರ್ಗಿಕ ಕೃಷಿ ಮಾಡುವ ಕುರಿತು ಉತ್ತೇಜನ ನೀಡುವುದು.
* ಹವಾಮಾನಕ್ಕೆ ತಕ್ಕಂತೆ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು.
* ರೈತರ ಆದಾಯ ದ್ವಿಗುಣಗೊಳಿಸಲು ವಿವಿಯು ಆರ್ಥಿಕ ಸ್ವಾವಲಂಬನೆ ಸುಸ್ಥಿರ ನೀಡುವುದು.
ಬ್ಯಾಂಕನಲ್ಲಿ ದೊರೆಯುವ ಸಾಲದ ಸೌಲಭ್ಯ ಕುರಿತು ಮಾಹಿತಿ ಒದಗಿಸುವುದು.
ಒಟ್ಟಾರೆ ಹೇಳೋದಾದರೆ ವಿವಿಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕುಲಪತಿಯೊಬ್ಬರು ರೈತರ ಮನೆ ಬಾಗಿಲಿಗೆ ಹೋಗಿ ರೈತರ ಕಣ್ಣೀರು ಒರೆಸಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಸರ್ಕಾರದ ಮಾದರಿಯಲ್ಲಿ ಬಸವರಾಜಪ್ಪ ಅವರು ಕುಲಪತಿಗಳ ನಡೆ ರೈತರ ಕಡೆ ಎಂಬ ವಿನೂತನ ಯೋಜನೆ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇವರ ಒಂದು ರೈತ ಕಾಳಜಿಗೆ ಒಂದು ಸೆಲ್ಯೂಟ್ ಹೊಡೆಯಲೇ ಬೇಕು.
ಸಂಜಯ್ ಡೋಂಗರೆ ಜೊತೆ ಮುಕುಂದ
9ಲೈವ್ ನ್ಯೂಸ ಧಾರವಾಡ