ಶಬರಿಮಲೆಯಲ್ಲಿ ಮಂಡಲ ಕಾಲದ ಪೂಜೆ ಆರಂಭ; ಜನ ಸಾಗರ

ಶಬರಿಮಲೆ: ವೃಶ್ಚಿಕ ಮಾಸದ ಮೊದಲ ದಿನ ಮುಂಜಾನೆ ಶಬರಿಮಲೆ ಅಯ್ಯಪ್ಪ ದೇಗುಲ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಶಬರಿಮಲೆ ಅರ್ಚಕರಾಗಿ ಪದಗ್ರಹಣ ಮಾಡಿದ ಕೆ. ಜಯರಾಮನ್ ನಂಬೂದಿರಿ ಗುರುವಾರ ಮುಂಜಾನೆ ದೇಗುಲದ ಬಾಗಿಲು ತೆರೆದಿದ್ದಾರೆ. ಮಂಡಲ ಕಾಲದ ಪೂಜೆಗಳು, ತುಪ್ಪದ ಅಭಿಷೇಕ ಆರಂಭವಾಗಿದೆ. ಬುಧವಾರ ಸಂಜೆ 5.30ಕ್ಕೆ ಅಯ್ಯಪ್ಪ ಸನ್ನಿಧಿಯ ಬಾಗಿಲು ತೆರೆದು ತುಪ್ಪದ ದೀಪ ಬೆಳಗುವುದರೊಂದಿಗೆ ಮಂಡಲ ಕಾಲ ಪೂಜೆಗಳು ಆರಂಭವಾದವು.