ಬರೋಬ್ಬರಿ 8 ಕೋಟಿ ವಶಕ್ಕೆ ಪಡೆದ ಕೊಲ್ಕತ್ತಾ ಪೊಲೀಸರು; ಏನಿದು ಘಟನೆ..?

ಬರೋಬ್ಬರಿ 8 ಕೋಟಿ ವಶಕ್ಕೆ ಪಡೆದ ಕೊಲ್ಕತ್ತಾ ಪೊಲೀಸರು; ಏನಿದು ಘಟನೆ..?

ಶ್ಚಿಮ ಬಂಗಾಳದ ಹೌರಾದಲ್ಲಿ ಇಬ್ಬರು ಉದ್ಯಮಿ ಸಹೋದರರ ಅಪಾರ್ಟ್‌ಮೆಂಟ್‌ ಮತ್ತು ಕಾರ್‌ನಲ್ಲಿದ್ದ ಸುಮಾರು 8 ಕೋಟಿ ರೂಪಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಉದ್ಯಮಿಗಳು ಭಾರೀ ಮೊತ್ತದ ವಹಿವಾಟು ನಡೆಸಿದ್ದ ಬಗ್ಗೆ ಬ್ಯಾಂಕ್‌ನವರು ಪೊಲೀಸರನ್ನ ಎಚ್ಚರಿಸಿದ್ರು.

ಈ ಹಿನ್ನಲೆ ಶೋಧಕಾರ್ಯ ನಡೆಸ್ಲಾಗಿದೆ. ಶಿದ್‌ಪುರ್‌ನಲ್ಲಿರೋ ಸೈಲೇಶ್‌ ಪಾಂಡೆ ಮತ್ತು ಅರವಿಂದ್‌ ಪಾಂಡೆ ಮನೆ ಮುಂದೆ ನಿಲ್ಲಿಸಿದ್ದ ಕಾರ್‌ನಲ್ಲಿ 2 ಕೋಟಿ ಹಾಗೂ ಫ್ಲ್ಯಾಟ್‌ ಮೇಲೆ ದಾಳಿ ಮಾಡಿದಾಗ ಬೆಡ್‌ಬಾಕ್ಸ್‌ನಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಈ ಸಂಬಂಧ ಹರೆ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂದ್ಹಾಗೆ ಕೊಲ್ಕತ್ತಾದಲ್ಲಿ ಈ ವರ್ಷ ಜುಲೈನಿಂದ ಭಾರೀ ಪ್ರಮಾಣದ ಮೊತ್ತವನ್ನ ಸೆಂಟ್ರಲ್‌ ಮತ್ತು ಸ್ಟೇಟ್‌ ಇನ್ವೆಸ್ಟಿಗೇಶನ್‌ ಏಜೆನ್ಸಿ ಸೀಜ್‌ ಮಾಡ್ತಿದೆ. ಇದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.