ಲಾಲಿಹಾಡು ವಿಭಾಗದಲ್ಲಿ ಕರ್ನಾಟಕದ ವ್ಯಕ್ತಿಗೆ ಮನ್ ಕಿ ಬಾತ್ನಲ್ಲಿ ಮೊದಲ ಪ್ರಶಸ್ತಿ ಘೋಷಿಸಿದ ಪ್ರಧಾನಿ ಮೋದಿ

ಲಾಲಿಹಾಡು ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ವಿಎಂ ಮಂಜುನಾಥ್ ಮೊದಲ ಸ್ಥಾನ ಪಡೆದಿದ್ದಾರೆ.
ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ವಿಜಯದುರ್ಗಾ ಪ್ರಥಮ ಸ್ಥಾನ ಪಡೆದಿದ್ದಾರೆ. ಉಸ್ತಾದ್ ಬಿಸ್ಮಿಲ್ಲಾಖಾನ್ ಪುರಸ್ಕಾರವನ್ನು ಪ್ರತಿಭಾಶಾಲಿ ಕಲಾವಿದರಿಗೆ ನೀಡಲಾಯಿತು.
ನಮ್ಮ ದೇಶದಲ್ಲಿ ಕಣ್ಮರೆಯಾಗಿ, ಜನರ ಮನಸ್ಸು ಮತ್ತು ಹೃದಯದಿಂದ ದೂರ ಸರಿದಿರುವ ಇಂತಹ ಅನೇಕ ಶ್ರೇಷ್ಠ ಸಂಪ್ರದಾಯಗಳಿವೆ, ಆದರೆ ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೋದಿ ಹೇಳಿದರು.
ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ದೇಶದಲ್ಲಿ ಡಿಜಿಟಲ್ ಇಂಡಿಯಾದ ಶಕ್ತಿಯು ಮೂಲೆ ಮೂಲೆಯನ್ನು ತಲುಪುತ್ತಿದೆ ಎಂದು ಪ್ರಧಾನಿ ಹೇಳಿದರು. ಇ-ಸಂಜೀವನಿ ಎಂಬ ಆಪ್ ಇದೆ. ಈ ಅಪ್ಲಿಕೇಶನ್‌ನಿಂದ, ನೀವು ವೀಡಿಯೊ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಸಲಹೆಯನ್ನು ಪಡೆಯಬಹುದು.
ನಿಮ್ಮ ಮನಸ್ಸಿನ ಶಕ್ತಿ ನಿಮಗೆ ತಿಳಿದಿದೆ, ಅದೇ ರೀತಿ, ಸಮಾಜದ ಶಕ್ತಿಯೊಂದಿಗೆ ದೇಶದ ಶಕ್ತಿಯು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ನಾವು ಮನ್ ಕಿ ಬಾತ್ ನ ವಿವಿಧ ಸಂಚಿಕೆಗಳಲ್ಲಿ ನೋಡಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ ಮತ್ತು ಅನುಭವಿಸಿದ್ದೇವೆ ಎಂದು ಹೇಳಿದರು. ಶತಮಾನದತ್ತ ಸಾಗುತ್ತಿರುವ ಈ ಪಯಣದಲ್ಲಿ ನೀವೆಲ್ಲರೂ ಮನ್ ಕಿ ಬಾತ್ ಅನ್ನು ಸಾರ್ವಜನಿಕ ಸಹಭಾಗಿತ್ವದ ಅಭಿವ್ಯಕ್ತಿಗೆ ಅದ್ಭುತವಾದ ವೇದಿಕೆಯನ್ನಾಗಿ ಮಾಡಿದ್ದೀರಿ ಎಂದರು,
ಈ ಮೂಲಕ 10 ಕೋಟಿ ರೋಗಿಗಳು ಮತ್ತು ವೈದ್ಯರೊಂದಿಗೆ ಅದ್ಭುತ ಸಂಬಂಧವನ್ನು ಬೆಸೆಯಬಲ್ಲದು, ಈ ಸಾಧನೆಗಾಗಿ ನಾನು ಎಲ್ಲಾ ವೈದ್ಯರು ಮತ್ತು ರೋಗಿಗಳನ್ನು ಅಭಿನಂದಿಸುತ್ತೇನೆ ಎಂದರು.
ಭಾರತದ ಜನರು ತಂತ್ರಜ್ಞಾನವನ್ನು ಹೇಗೆ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.