ಭಾರತದ ಸ್ಟಾರ್ಟಪ್​ಗಳಲ್ಲಿ 2.3 ಲಕ್ಷ ಉದ್ಯೋಗ ಸೃಷ್ಟಿ: ವರದಿ

ಭಾರತದ ಸ್ಟಾರ್ಟಪ್​ಗಳಲ್ಲಿ 2.3 ಲಕ್ಷ ಉದ್ಯೋಗ ಸೃಷ್ಟಿ: ವರದಿ

ಈ ವರ್ಷ ಭಾರತದ ಸ್ಟಾರ್ಟಪ್​​ಗಳು 2,30,000 ಉದ್ಯೋಗ ಸೃಷ್ಟಿಸಿವೆ ಎಂದು ಹಣಕಾಸು ಸೇವಾ ಸಂಸ್ಥೆ 'ಸ್ಟ್ರೈಡ್​ವನ್' ವರದಿ ತಿಳಿಸಿದೆ. 2017-22 ಅವಧಿಯಲ್ಲಿ ಸ್ಟಾರ್ಟಪ್​ಗಳ ವಾರ್ಷಿಕ ಬೆಳವಣಿಗೆ ದರ 78% ಹೆಚ್ಚಳವಾಗಿದೆ. 2022-27ರ ಅವಧಿಗೆ 24% ಹೆಚ್ಚಾಗಲಿದೆ. ಡಿಜಿಟಲ್ ಆರ್ಥಿಕತೆ ರೂಪಿಸುವ ನಿಟ್ಟಿಲ್ಲಿ ಕೇಂದ್ರ ನೀಡುತ್ತಿರುವ ಪ್ರೋತ್ಸಾಹ 2025ರ ವೇಳೆಗೆ ಉದ್ಯೋಗಾವಕಾಶವನ್ನ ಮತ್ತಷ್ಟು ಹೆಚ್ಚಿಸಲಿದೆ. ಸ್ಟಾರ್ಟಪ್ ವ್ಯವಸ್ಥೆಯಿಂದ ಉದ್ಯೋಗ ಸೃಷ್ಟಿಯ ಸಾಮರ್ಥ್ಯ ವೃದ್ಧಿಯಾಗಿದೆ ಎಂದಿದೆ.