ಕಲ್ಲಿದ್ದಲು ಗುರಿ ಸಾಧನೆಯತ್ತ ದಾಪುಗಾಲು: ಸಚಿವ ಪ್ರಹ್ಲಾದ್‌ ಜೋಶಿ

ಕಲ್ಲಿದ್ದಲು ಗುರಿ ಸಾಧನೆಯತ್ತ ದಾಪುಗಾಲು: ಸಚಿವ ಪ್ರಹ್ಲಾದ್‌ ಜೋಶಿ

ಬೆಂಗಳೂರು: ದೇಶೀಯ ಕಲ್ಲಿದ್ದಲು ಉತ್ಪಾದನೆ ಪ್ರಮಾಣ 900 ಮಿಲಿಯನ್‌ ಟನ್‌ ಇದ್ದು, 2025-26ರ ವೇಳೆಗೆ ಒಂದು ಬಿಲಿಯನ್‌ ಟನ್‌ ತಲುಪಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಅವರು, ದೇಶದ ಒಟ್ಟಾರೆ ಆಂತರಿಕ ವೃದ್ಧಿ ದರ (ಜಿಡಿಪಿ)ದಲ್ಲಿ ಕಲ್ಲಿದ್ದಲು ಕ್ಷೇತ್ರದ ಪಾಲು ಶೇ.

2.5ರಷ್ಟು ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ನೀಡಿದ್ದಾರೆ. ಈ ಗುರಿ ಸಾಧನೆಯತ್ತ ದಾಪುಗಾಲಿಟ್ಟಿದ್ದು, ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ 108 ಬ್ಲಾಕ್‌ಗಳಲ್ಲಿ ಗಣಿಗಾರಿಕೆ ನಡೆದಿದೆ ಎಂದ ಅವರು, ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದ ಹರಾಜಿನಲ್ಲಿ ಉದ್ಯಮಿಗಳು ಭಾಗವಹಿಸುವವರಿಗೆ ಶೇ. 50 ರಿಯಾಯಿತಿಗಳನ್ನು ನೀಡಲಾಗಿದೆ. ಇದರ ಸದುಪಯೋಗ ಪಡೆಯಬೇಕು ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದರು.