ಶೀಘ್ರದಲ್ಲಿಯೇ 300 ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಅಸ್ತು
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಕೇಡರ್ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದ್ದು, ಶೀಘ್ರದಲ್ಲಿಯೇ 300 ಅಧಿಕಾರಿಗಳ ನೇಮಕಾತಿಗೆ ಮುಂದಾಗಿದೆ.
ಪ್ರಸ್ತುತ ಇಲಾಖೆಯಲ್ಲಿ 1,801 ಕೃಷಿ ಅಧಿಕಾರಿಗಳು ಮತ್ತು 2,099 ಸಹಾಯಕ ಕೃಷಿ ಅಧಿಕಾರಿಗಳ ಮಂಜೂರಾದ ಸಾಮರ್ಥ್ಯವಿದ್ದು, ಹಿಂದಿನ ನಿಯಮಗಳ ಪ್ರಕಾರ, ಬಿಎಸ್ಸಿ ಕೃಷಿ ಪದವೀಧರರು ಮಾತ್ರ ನೇಮಕಾತಿಗೆ ಅರ್ಹರಾಗಿದ್ದರು.
ಆದರೆ ಈಗ ತಂದಿರುವ ತಿದ್ದುಪಡಿಯೊಂದಿಗೆ ಬಿಎಸ್ಸಿ ಅಗ್ರಿಕಲ್ಚರ್ ಮಾರ್ಕೆಟಿಂಗ್ ಮತ್ತು ಸಹಕಾರ, ಬಿಎಸ್ಸಿ ಆನರ್ಸ್ ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್, ಬಿಎಸ್ಸಿ ಆನರ್ಸ್ ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್, ಬಿಎಸ್ಸಿ ಅಗ್ರಿಕಲ್ಚರ್ ಬಯೋಟೆಕ್ನಾಲಜಿ, ಬಿಎಸ್ಸಿ ಅಗ್ರಿಕಲ್ಚರ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಶೇಕಡಾ 15 ರಷ್ಟು ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. 85 ರಷ್ಟು ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.