ರೈತರ ಬೀಜೋಪಕರಣಗಳ ಬೆಲೆ ಇಳಿಸಿ
ಧಾರವಾಡ: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಪರಿಷ್ಕರಿಸಬೇಕು, ರಸಗೊಬ್ಬರಗಳ ಬೆಲೆ ವಾಪಸ್ಸು ಪಡೆದು ಹಿಂದಿನ ಬೆಲೆಯಂತೆಯೇ ನಿಗದಿ ಪಡಿಸಬೇಕು ಮತ್ತು ಯೂರಿಯಾ ಗೊಬ್ಬರದ ಕೊರತೆ ಉಂಟಾಗದAತೆ ಮುಂಜಾಗ್ರತಾ ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಯಂತ್ರೋಪಕರಣಗಳ ತುಂತುರು ನೀರಾವರಿ, ಹನಿ ನೀರಾವರಿ, ಬಿತ್ತನೆ ಬೀಜಗಳು, ಔಷಧಿಗಳ ಸಹಾಯ ದನವನ್ನು ಹಿಂದಿನ ವರ್ಷದಂತೆಯೇ ಮುಂದುವರಿಸಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳ ಬೆಲೆ ಜಾರಿಗೊಳಿಸಬೇಕು. ಬ್ಯಾಂಕ್, ಫೈನಾನ್ಸ್, ಸಹಕಾರ ಸಂಘಗಳ ಮತ್ತು ಹಣಕಾಸು ಸಂಸ್ಥೆಗಳ ಕೋವಿಡ್-೧೯ ಸಂದರ್ಭದಲ್ಲಿ ರೈತರ ಸಾಲಗಳ ಮೇಲಿನ ಬಡ್ಡಿಯನ್ನು ಕೈ ಬಿಡಬೇಕು. ಲಾಕ್‌ಡೌನ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹೂವು-ಹಣ್ಣು, ಇತರೆ ಬೆಳೆಗಳ ಬೆಲೆ ಕುಸಿದಿದ್ದು ಸರ್ಕಾರ ಕೂಡಲೇ ಬೆಲೆ ನಷ್ಟಕ್ಕೆ ಸರಿಸಮನಾಗಿ ಪರಿಹಾರ ಘೋಷಿಸಬೇಕು. ಕೊರೊನಾ ಸೋಂಕಿನಿAದ ಮರಣ ಹೊಂದಿದ ರೈತ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು, ಇನ್ನೂ ಕೆಲವೇ ದಿನಗಳಲ್ಲಿ ಬಿತ್ತನೆ ಪ್ರಾರಂಭ ವಾಗುತ್ತಿದ್ದು ಕಳೆದ ಬಾರಿ ಗೊಬ್ಬರದ ಕೊರತೆಯಿಂದ ಹಲವಾರು ರೈತರಿಗೆ ನಷ್ಟವಾಗಿದ್ದು, ಮುಂಜಾಗೃತಾ ಕ್ರಮವಾಗಿ ರೈತರಿಗೆ ಬೇಕಾಗುವಷ್ಟು ಗೊಬ್ಬರವನ್ನು ಕಾಯ್ದಿರಿಸಿ ರೈತರ ಹಿತ ಕಾಪಾಡಬೇಕು. ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ತುರ್ತಾಗಿ ಕಬ್ಬಿನ ಬಾಕಿ ಬಿಲ್ಲ ಬಿಡುಗಡೆ ಮಾಡುವಂತೆ ಸರ್ಕಾರ ಈ ಕೂಡಲೇ ನಿರ್ದೇಶನ ನೀಡಬೇಕೆಂದು ಒತ್ತಾಯಿಸಲಾಯಿತು. ಪೂಜ್ಯ ಶ್ರೀ ಶಶಿಕಾಂತ ಪಡಸಲಗಿ .ಗುರುಗಳು (ಇಂಚಗೇರಿ ಆಧ್ಯಾತ್ಮ ಸಂಪ್ರದಾಯ) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವ ಅಧ್ಯಕ್ಷರು, ಶ್ರೀಶೈಲಗೌಡ ಪಾಟೀಲ ಕಮತರ ರಾಜ್ಯ ಉಪಾಧ್ಯಕ್ಷರು, ರೈತಸಂಘ ರಾಜ್ಯ ಸಂಚಾಲಕರಾದ ಮಂಜುನಾಥ ಉಪ್ಪಾರ, ಜಿಲ್ಲಾ ಗೌರವ ಅಧ್ಯಕರಾದ ಉಳವಪ್ಪ ದಿವಟಗಿ, ಅಮೃತ ಕಂಬಾರ, ಜಿಲ್ಲಾ ಮುಖಂಡರಾದ ನಾಗಪ್ಪ ಜ್ಯೋತಿನಾಯ್ಕರ. ಗಂಗಾಧರ ಹೊಂಗಲ, ತಾಲೂಕು ಅಧ್ಯಕ್ಷರಾದ ಶಿವನಗೌಡ ಸಿಂದೋಗಿ, ಮಹಾದೇವಪ್ಪ ಹೂಲಕೊಪ್ಪ, ಸುಭಾಸ ಮಾದನ್ನವರ ಉಪಸ್ಥಿತರಿದ್ದರು.
ಧಾರವಾಡ: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಪರಿಷ್ಕರಿಸಬೇಕು, ರಸಗೊಬ್ಬರಗಳ ಬೆಲೆ ವಾಪಸ್ಸು ಪಡೆದು ಹಿಂದಿನ ಬೆಲೆಯಂತೆಯೇ ನಿಗದಿ ಪಡಿಸಬೇಕು ಮತ್ತು ಯೂರಿಯಾ ಗೊಬ್ಬರದ ಕೊರತೆ ಉಂಟಾಗದAತೆ ಮುಂಜಾಗ್ರತಾ ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಯಂತ್ರೋಪಕರಣಗಳ ತುಂತುರು ನೀರಾವರಿ, ಹನಿ ನೀರಾವರಿ, ಬಿತ್ತನೆ ಬೀಜಗಳು, ಔಷಧಿಗಳ ಸಹಾಯ ದನವನ್ನು ಹಿಂದಿನ ವರ್ಷದಂತೆಯೇ ಮುಂದುವರಿಸಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳ ಬೆಲೆ ಜಾರಿಗೊಳಿಸಬೇಕು. ಬ್ಯಾಂಕ್, ಫೈನಾನ್ಸ್, ಸಹಕಾರ ಸಂಘಗಳ ಮತ್ತು ಹಣಕಾಸು ಸಂಸ್ಥೆಗಳ ಕೋವಿಡ್-೧೯ ಸಂದರ್ಭದಲ್ಲಿ ರೈತರ ಸಾಲಗಳ ಮೇಲಿನ ಬಡ್ಡಿಯನ್ನು ಕೈ ಬಿಡಬೇಕು.
ಲಾಕ್‌ಡೌನ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹೂವು-ಹಣ್ಣು, ಇತರೆ ಬೆಳೆಗಳ ಬೆಲೆ ಕುಸಿದಿದ್ದು ಸರ್ಕಾರ ಕೂಡಲೇ ಬೆಲೆ ನಷ್ಟಕ್ಕೆ ಸರಿಸಮನಾಗಿ ಪರಿಹಾರ ಘೋಷಿಸಬೇಕು. ಕೊರೊನಾ ಸೋಂಕಿನಿAದ ಮರಣ ಹೊಂದಿದ ರೈತ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು, ಇನ್ನೂ ಕೆಲವೇ ದಿನಗಳಲ್ಲಿ ಬಿತ್ತನೆ ಪ್ರಾರಂಭ ವಾಗುತ್ತಿದ್ದು ಕಳೆದ ಬಾರಿ ಗೊಬ್ಬರದ ಕೊರತೆಯಿಂದ ಹಲವಾರು ರೈತರಿಗೆ ನಷ್ಟವಾಗಿದ್ದು, ಮುಂಜಾಗೃತಾ ಕ್ರಮವಾಗಿ ರೈತರಿಗೆ ಬೇಕಾಗುವಷ್ಟು ಗೊಬ್ಬರವನ್ನು ಕಾಯ್ದಿರಿಸಿ ರೈತರ ಹಿತ ಕಾಪಾಡಬೇಕು.
ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ತುರ್ತಾಗಿ ಕಬ್ಬಿನ ಬಾಕಿ ಬಿಲ್ಲ ಬಿಡುಗಡೆ ಮಾಡುವಂತೆ ಸರ್ಕಾರ ಈ ಕೂಡಲೇ ನಿರ್ದೇಶನ ನೀಡಬೇಕೆಂದು ಒತ್ತಾಯಿಸಲಾಯಿತು. ಪೂಜ್ಯ ಶ್ರೀ ಶಶಿಕಾಂತ ಪಡಸಲಗಿ .ಗುರುಗಳು (ಇಂಚಗೇರಿ ಆಧ್ಯಾತ್ಮ ಸಂಪ್ರದಾಯ) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವ ಅಧ್ಯಕ್ಷರು, ಶ್ರೀಶೈಲಗೌಡ ಪಾಟೀಲ ಕಮತರ ರಾಜ್ಯ ಉಪಾಧ್ಯಕ್ಷರು, ರೈತಸಂಘ ರಾಜ್ಯ ಸಂಚಾಲಕರಾದ ಮಂಜುನಾಥ ಉಪ್ಪಾರ, ಜಿಲ್ಲಾ ಗೌರವ ಅಧ್ಯಕರಾದ ಉಳವಪ್ಪ ದಿವಟಗಿ, ಅಮೃತ ಕಂಬಾರ, ಜಿಲ್ಲಾ ಮುಖಂಡರಾದ ನಾಗಪ್ಪ ಜ್ಯೋತಿನಾಯ್ಕರ. ಗಂಗಾಧರ ಹೊಂಗಲ, ತಾಲೂಕು ಅಧ್ಯಕ್ಷರಾದ ಶಿವನಗೌಡ ಸಿಂದೋಗಿ, ಮಹಾದೇವಪ್ಪ ಹೂಲಕೊಪ್ಪ, ಸುಭಾಸ ಮಾದನ್ನವರ ಉಪಸ್ಥಿತರಿದ್ದರು.