ಹುಬ್ಬಳ್ಳಿ ಧಾರವಾಡ ಬಂಟರ ಸಂಘದಿಂದ ಆಜಾದಿ ಕಾ ಅಮೃತ್ ಮಹೋತ್ಸವ | Hubli |

ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದಿರುವ ಹಿನ್ನಲೆಯಲ್ಲಿ ಎಲ್ಲಡೆ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದು, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಆರ್ಏನ್ಎಸ್ ವಿದ್ಯಾನಿಕೇತನ ಶಾಲೆಯ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾದ ಏನ್ ಐ ಶೆಟ್ಟಿ ಉದ್ದಿಮೆದಾರರು, ಸಮಾಜದ ಪ್ರಮುಖರು ಹಾಗೂ ಶಾಲಾ ಶಿಕ್ಷಕರೊಂದಿಗೆ ೭೫ ನೇ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿದರು ಹಾಗೂ ಬಂಟರ ಸಂಘದ ಆರ್ ಏನ್ ಶೆಟ್ಟಿ ಕಲ್ಯಾಣ ಮಂಟಪದ ಸಂಕಿರಣದಲ್ಲಿ ಹೋಟೆಲ್ ಉದ್ದಿಮೆದಾರರಾದ ಭುಜಂಗ ಶೆಟ್ಟಿಯವರು ಸಂಘದ ಸರ್ವ ಸದಸ್ಯರೊಂದಿಗೆ ದೇಶದ ೭೫ ನೇ ಸ್ವಾತಂತ್ರೊ್ಯೀತ್ಸವದ ಧ್ವಜಾರೋಹಣ ವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಶ್ರೀ ಎಸ್ ಸುಭಾಸಚಂದ್ರ ಶೆಟ್ಟಿ, ಉಪಾಧ್ಯಕ್ಷರು ಶ್ರೀ ಎಚ್ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಶ್ರೀ ವಿಶ್ವನಾಥ್ ಆರ್ ಶೆಟ್ಟಿ, ಸಹ ಕಾರ್ಯದರ್ಶಿ ಶ್ರೀ ವೀರೇಂದ್ರ ಶೆಟ್ಟಿ, ಕೋಶಾಧಿಕಾರಿ ಶ್ರೀ ಹರ್ಷಕುಮಾರ ಶೆಟ್ಟಿ, ಮಾಜಿ ಪದಾಧಿಕಾರಿಗಳು, ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.