ಜಿ20 ಅಧ್ಯಕ್ಷ ಸ್ಥಾನ ಜಾಗತಿಕ ಒಳಿತಿನ ಮೇಲೆ ಕೇಂದ್ರೀಕರಿಸಲು ಭಾರತಕ್ಕೆ ಒಂದು ಪ್ರಮುಖ ಅವಕಾಶ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜಿ20 ಅಧ್ಯಕ್ಷ ಸ್ಥಾನ ಜಾಗತಿಕ ಒಳಿತಿನ ಮೇಲೆ ಕೇಂದ್ರೀಕರಿಸಲು ಭಾರತಕ್ಕೆ ಒಂದು ಪ್ರಮುಖ ಅವಕಾಶ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' 95 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವು 130 ಕೋಟಿ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ನನಗೆ ಒಂದು ಮಾರ್ಗವಾಗಿದೆ ಎಂದು ಹೇಳಿದರು.

ತೆಲಂಗಾಣದ ಹರಿ ಪ್ರಸಾದ್ ಎಂಬುವವರು ಭಾರತದ ಜಿ20 ಕೈಯಿಂದ ನೇಯ್ದ ಲೋಗೋವನ್ನು ನನಗೆ ಕಳುಹಿಸಿದ್ದಾರೆ ಎಂದು ಪ್ರಧಾನಿ ತಮ್ಮ ಭಾಷಣದ ಆರಂಭದಲ್ಲಿ ಪ್ರಸ್ತಾಪಿಸಿದರು. ದೇಶದಾದ್ಯಂತದ ಜನರು ಭಾರತಕ್ಕೆ ಜಿ 20 ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಎಷ್ಟು ಹೆಮ್ಮೆ ಇದೆ ಎಂದು ನನಗೆ ಪತ್ರ ಬರೆದಿದ್ದಾರೆ. ಅಮೃತ್ ಕಾಲ್ ಅಡಿಯಲ್ಲಿ ಭಾರತವು ಈ ಜವಾಬ್ದಾರಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಜಾಗತಿಕ ಒಳಿತಿನ ಮೇಲೆ ಕೇಂದ್ರೀಕರಿಸಲು ಜಿ 20 ಅಧ್ಯಕ್ಷ ಸ್ಥಾನವು ಭಾರತಕ್ಕೆ ಪ್ರಮುಖ ಅವಕಾಶವಾಗಿದೆ. ಜಿ 20 ಅಧ್ಯಕ್ಷ ಸ್ಥಾನವು ನಮಗೆ ಒಂದು ಅವಕಾಶವಾಗಿದೆ. ನಾವು ಜಾಗತಿಕ ಒಳಿತಿನತ್ತ ಗಮನಹರಿಸಬೇಕು. ಅದು ಶಾಂತಿ, ಏಕತೆ ಅಥವಾ ಸುಸ್ಥಿರ ಅಭಿವೃದ್ಧಿಯಾಗಿರಲಿ, ಭಾರತದ ಬಳಿ ಪರಿಹಾರವಿದೆ. ಈ ವಿಷಯಗಳಿಗೆ ಸಂಬಂಧಿಸಿದ ಸವಾಲುಗಳಿಗೆ ನಾವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಥೀಮ್ ಅನ್ನು ನೀಡಿದ್ದೇವೆ ಎಂದು ಹೇಳಿದರು.