ಅಂತಹ ಆಟಗಾರರು ಮರಗಳಲ್ಲಿ ಬೆಳೆಯುವುದಿಲ್ಲ, ಆತನಿಗೆ ಬದಲಿ ಯಾರೂ ಇಲ್ಲ': ಶಿಷ್ಯನನ್ನು ಬಿಟ್ಟುಕೊಡದ ಪಾಂಟಿಂಗ್

ಕಳೆದ ವರ್ಷದ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾದ ರಿಷಬ್ ಪಂತ್, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದ ಪ್ರಮುಖ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಘಿರುವ ಪಂತ್, ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂತ್ ಮುನ್ನಡೆಸಬೇಕಿತ್ತು. ಈ ಬಗ್ಗೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಪಂತ್ ಈ ವರ್ಷ ತಂಡವನ್ನು ಮುನ್ನಡೆಸಲು ಮ್ಯಾಜಿಕ್ ನಡೆಯಬೇಕಷ್ಟೇ. ಆರೋಗ್ಯ ಮತ್ತು ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮತ್ತು ಡೆಲ್ಲಿ ತಂಡದ ಪ್ರಸ್ತುತ ಮುಖ್ಯ ಕೋಚ್ ರಿಕಿ ಪಾಂಟಿಂಗ್, ಪಂತ್ನಂತಹ ಆಟಗಾರರಿಗೆ ಬದಲಿ ಹುಡುಕುವುದು ಸುಲಭವಲ್ಲ ಎಂದು ಹೇಳಿದ್ದಾರೆ.