ಗೆದ್ದು ಬೀಗಿದ ‘ಅವತಾರ್ 2’; ಇನ್ನುಳಿದ ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್
ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಮಾಡುವ ಪ್ರತಿ ಸಿನಿಮಾಗಳು ದಾಖಲೆ ಬರೆಯುತ್ತವೆ. ಈಗ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಮೂಲಕ ಗೆದ್ದು ಬೀಗುತ್ತಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ 1.5 ಬಿಲಿಯನ್ ಡಾಲರ್ಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗಾಗಿ ‘ಅವತಾರ್’ ಸಿನಿಮಾದ 3, 4 & 5ನೇ ಸೀಕ್ವೆಲ್ಗಳನ್ನು ಮಾಡಲು ಜೇಮ್ಸ್ ಕ್ಯಾಮೆರಾನ್ ಮುಂದೆ ಬಂದಿದ್ದಾರೆ. ಅಚ್ಚರಿ ಎಂದರೆ, ‘ಅವತಾರ್ 3’ ಸಿನಿಮಾದ ಬಹುತೇಕ ದೃಶ್ಯಗಳನ್ನು ಈಗಾಗಲೇ ಚಿತ್ರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.