ಬೆಂಗಳೂರಿನಲ್ಲಿ ಯುಕೆಜಿ ಮಗುವನ್ನೇ ಫೇಲ್ ಮಾಡಿದ ಶಾಲೆ: ನೋಟಿಸ್ ನೀಡಿ ಶಾಕ್ ಕೊಟ್ಟ ಬಿಇಓ

ಬೆಂಗಳೂರು: ನಗರದ ಶಾಲೆಯೊಂದರ ಯುಕೆಜಿ ಮಗುವೊಂದನ್ನು ಫೇಲ್ ಮಾಡಲಾಗಿದೆ. ಪೂರ್ವ ಪ್ರಾಥಮಿಕದಿಂದ, ಪ್ರಾಥಮಿಕ ತರಗತಿಯವರೆಗೆ ಮಕ್ಕಳನ್ನು ಫೇಲ್ ಮಾಡುವಂತಿಲ್ಲ ಎಂಬ ನಿಯಮವಿದೆ. ಈ ನಿಯಮವನ್ನು ಮೀರಿ, ಯುಕೆಜಿ ಮಗುವನ್ನು ಫೇಲ್ ಮಾಡಿದಂತ ಶಾಲೆಗೆ ಬಿಇಓ ನೋಟಿಸ್ ನೀಡಿ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವಂತ ಸೆಂಟ್ ಜೋಸೆಫ್ ಚಾರ್ಮಿನೆಡ್ ಶಾಲೆಯಲ್ಲಿ ಯುಕೆಜಿ ಮಗುವನ್ನು ಫೇಲ್ ಮಾಡಲಾಗಿತ್ತು. ಈ ಸಂಬಂಧ ಪೋಷಕರು ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಇಂದು ಯುಕೆಜಿ ಮಗುವನ್ನು ಫೇಲ್ ಮಾಡಿದ ಸೆಂಟ್ ಜೋಸೆಫ್ ಚಾರ್ಮಿನೆಡ್ ಶಾಲೆಗೆ ಆನೇಕಲ್ ಬಿಇಒ ಜಯಲಕ್ಷ್ಮೀ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ನಲ್ಲಿ ಯುಕೆಜಿ ಮಗುವನ್ನು ಯಾವ ಕಾರಣದಿಂದ ಫೇಲ್ ಮಾಡಲಾಗಿದೆ ಎಂಬುದಕ್ಕೆ ಉತ್ತರ ನೀಡುವಂತೆ ತಿಳಿಸಲಾಗಿದೆ.