ದಲಿತ ಮುಖಂಡ, ರಾಜ್ಯ ಪ್ರಶಸ್ತಿ ವಿಜೇತ ಬರಮಪ್ಪ ಬೆಲ್ಲಾದ ವಿಧಿವಶ | Koppal |
ದಲಿತ ಮುಖಂಡ, ರಾಜ್ಯ ಪ್ರಶಸ್ತಿ ವಿಜೇತ ಬರಮಪ್ಪ ಬೆಲ್ಲಾದ ತೀವ್ರ ಹೃದಯಾಘಾತದಿಂದ ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ಸ್ವ ಗೃಹದಲ್ಲಿ ಇಂದು ವಿಧಿವಶರಾಗಿದ್ದಾರೆ. ಮಾಜಿ ಕಾಂಗ್ರೆಸ್ ರಾಜ್ಯ ಸಂಚಾಲಕರೂ, ಕೆಪಿಸಿಸಿ ಭೂ ನ್ಯಾಯ ಮಂಡಳಿ ಅಧ್ಯಕ್ಷರಾಗಿದ್ದ ಬರಮಪ್ಪ ಬೆಲ್ಲಾದ ದಲಿತ ದಮನೀತರ ಚಳುವಳಿಗಳಲ್ಲಿ ಮಂಚೂಣಿಯಲ್ಲಿದ್ದರು. ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂತಾಪ ಸೂಚಿಸಿದ್ದು, ಇವರ ಸಾವಿನಿಂದ ಇಡೀ ಮುನಿರಾಬಾದ್ ಗ್ರಾಮ. ದುಖಃತಪ್ತವಾಗಿದೆ. ಮುನಿರಾಬಾದ್ ಗ್ರಾಮದಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ.