ಮನೆ ಇಲ್ಲದವರಿಗೆ ಗುಡ್ ನ್ಯೂಸ್ : 5 ಲಕ್ಷ ರೂ. ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು :ಮನೆ ಇಲ್ಲದವರಿಗೆ 5 ಲಕ್ಷ ರೂ. ನೆರವು ನೀಡುವ ಒಂಟಿ ಮನೆ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ 20ರವರೆಗೆ ವಿಸ್ತರಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವವರು ಒಂಟಿಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ.
ರಾಜ್ಯ ಸರ್ಕಾರ ಒಂಟಿ ಮನೆ ಯೋಜನೆಯನ್ನು ಜಾರಿಗೆ ತಂದಿದೆ.ಈ ಒಂದು ಒಂಟಿಮನೆ ಯೋಜನೆ ಮೂಲಕ ನಿಮ್ಮ ಹತ್ತಿರ ಖಾಲಿ ಜಾಗವಿದ್ದರೆ ಅಂತಹ ಖಾಲಿ ಜಾಗಗಳಲ್ಲಿ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಲು ಸುಮಾರು 5 ಲಕ್ಷ ರೂಪಾಯಿಗಳ ವರೆಗೆ ಒಂಟಿ ಮನೆ ಯೋಜನೆಯಲ್ಲಿ ಉಚಿತವಾಗಿ ಸಹಾಯಧನವನ್ನು ನೀಡಲಾಗುತ್ತಿದೆ.
ಒಂದು ವೇಳೆ ನೀವು ಖಾಲಿ ಜಾಗವನ್ನು ಹೊಂದಿಲ್ಲದಿದ್ದರೆ ಯಾವುದಾದರೂ ಅಪಾರ್ಟ್ಮೆಂಟ್ ಗಳಲ್ಲಿ ಮನೆಗಳನ್ನು ಖರೀದಿ ಮಾಡಲು ಸುಮಾರು 5 ಲಕ್ಷ ರೂಪಾಯಿಗಳನ್ನು ಈ ಒಂದು ಒಂಟಿ ಮನೆ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಉಚಿತವಾಗಿ ಸಹಾಯಧನವನ್ನು ನೀಡಲಾಗುತ್ತಿದೆ