ಪ್ರವಾಸಿಗರಿಗೆ ಗುಡ್‌ ನ್ಯೂಸ್‌ : ರೈಲ್ವೆಯಿಂದ ಭಾರತ್ ಗೌರವ್ ಡಿಲಕ್ಸ್ A/C ಟೂರಿಸ್ಟ್ ಟ್ರೈನ್‌ಆರಂಭ

ಪ್ರವಾಸಿಗರಿಗೆ ಗುಡ್‌ ನ್ಯೂಸ್‌ : ರೈಲ್ವೆಯಿಂದ ಭಾರತ್ ಗೌರವ್ ಡಿಲಕ್ಸ್ A/C ಟೂರಿಸ್ಟ್ ಟ್ರೈನ್‌ಆರಂಭ

ಹಮದಾಬಾದ್‌ : ಪ್ರವಾಸಿಗರ ಅನುಕೂಲಕ್ಕಾಗಿ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿಯಲ್ಲಿ ಗುಜರಾತ್‌ನ ಪರಂಪರೆ ಪ್ರದರ್ಶಿಸಲು ಭಾರತೀಯ ರೈಲ್ವೆಯು ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲು ಆರಂಭಕ್ಕೆ ಭರ್ಜರಿ ಸಿದ್ದತೆಗೆ ಮುಂದಾಗಿದೆ ಎಂದು ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ .

ಫೆಬ್ರವರಿ 28ರಂದು ದೆಹಲಿಯ ಸಫ್ದರ್ಜಂಗ್ ನಿಲ್ದಾಣದಿಂದ 'ಗರ್ವಿ ಗುಜರಾತ್' ಪ್ರವಾಸದ ರೈಲು ಹೊರಡಲಿದೆ. ಗುಜರಾತ್‌ನ ಪರಂಪರೆಯನ್ನು ಪ್ರದರ್ಶಿಸಲು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನದ ಪರಿಕಲ್ಪನೆಯ 'ಏಕ್ ಭಾರತ್ ಶ್ರೇಷ್ಠ ಭಾರತ' ಯೋಜನೆಯ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಪ್ರವಾಸಕ್ಕೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಗುರುಗ್ರಾಮ್, ರೇವಾರಿ, ರಿಂಗಾಸ್, ಫುಲ್ಲೆರಾ ಮತ್ತು ಅಜ್ಮೀರ್ ರೈಲು ನಿಲ್ದಾಣಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.

ಈ ರೈಲು ಪ್ರವಾಸದ ಪ್ಯಾಕೇಜ್‌ನ ಮೊದಲ ನಿಲುಗಡೆಯನ್ನು ಕೆವಾಡಿಯಾದಲ್ಲಿ ಇರಿಸಲಾಗಿದ್ದು, ಇದರಲ್ಲಿ ಏಕತೆಯ ಪ್ರತಿಮೆಯು ಆಕರ್ಷಣೆಯ ಕೇಂದ್ರವಾಗಿದೆ. 8 ದಿನಗಳ ಪ್ರಯಾಣದ ಅವಧಿಯಲ್ಲಿ ಸಂಪೂರ್ಣ ರೈಲು ಸುಮಾರು 3,500 ಕಿಮೀ ದೂರವನ್ನು ಕ್ರಮಿಸುತ್ತದೆ . ಪ್ರವಾಸವು ಗುಜರಾತ್‌ನ ಪ್ರಮುಖ ಯಾತ್ರಾಸ್ಥಳಗಳು ಮತ್ತು ಪಾರಂಪರಿಕ ಸ್ಥಳಗಳಾದ ಏಕತಾ ಪ್ರತಿಮೆ, ಚಂಪನೇರ್, ಸೋಮನಾಥ, ದ್ವಾರಕಾ, ನಾಗೇಶ್ವರ, ಬೇಟ್ ದ್ವಾರಕಾ, ಅಹಮದಾಬಾದ್, ಮೊಧೇರಾ ಮತ್ತು ಪಟಾನ್‌ಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ ಎಂದು ರೈಲ್ವೇ ಸಚಿವಾಲಯ ಮಾಹಿತಿ ನೀಡಿದ್ದಾರೆ.