ಕುರಿಗಾಹಿಗಳ ಮೇಲೆ ಹಲ್ಲೆ; 50ಕ್ಕೂ ಹೆಚ್ಚು ಕುರಿ ಕಳ್ಳತನ
ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿದ ಖದೀಮರು 50ಕ್ಕೂ ಹೆಚ್ಚು ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಕುರಿಗಾಹಿ ಬಾಲಪ್ಪ ಹುಡೇದ್ ಹಾಗೂ ಅವನ ಮಗನ ಕೈ ಕಾಲು ಕಟ್ಟಿ ಹಾಕಿದ ದುಷ್ಕರ್ಮಿಗಳು ಅವರ ಹಲ್ಲೆ ನಡೆಸಿದ್ದು, ಗಾಯಗಳಾಗಿವೆ. ನಿನ್ನೆ ರಾತ್ರಿ ಕುರಿ ದಡ್ಡಿಗೆ ಬಂದ ಖದೀಮರು ಕುರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.