ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ, ಬೀದಿ ಬದಿ ವ್ಯಾಪಾರಿ ಬಂಧನ

ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ, ಬೀದಿ ಬದಿ ವ್ಯಾಪಾರಿ ಬಂಧನ

ಚಿಕ್ಕಬಳ್ಳಾಪುರ: ನಗರದ ಮೀನು ಮಾಂಸದ ಮಾರುಕಟ್ಟೆ ಬಳಿ ಗುರುವಾರ ರಾತ್ರಿ 40 ವರ್ಷದ ಭಿಕ್ಷುಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಪ್ರಕರಣ ಸಂಬಂಧ ಬೀದಿ ಬದಿ ವ್ಯಾಪಾರಿ ಅಬ್ದುಲ್ಲಾ (24) ಎಂಬಾತನನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ಲಾ ತಳ್ಳುಗಾಡಿಯಲ್ಲಿ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ. ಹಲವು ದಿನಗಳಿಂದ ಭಿಕ್ಷುಕಿ ಈ ಪ‍್ರದೇಶದಲ್ಲಿ ಇದ್ದರು. ಭಿಕ್ಷೆ ಬೇಡಿದ ನಂತರ ಇಲ್ಲಿಗೆ ಬಂದು ಮಲಗುತ್ತಿದ್ದರು. ಅತ್ಯಾಚಾರ ಹಾಗೂ ಕೊಲೆಯು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಿಕ್ಷುಕಿಯ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.