ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ - ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ

ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ - ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ

ಮಂಡ್ಯ: ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ. ಈ ಭಾರಿ ಮಂಡ್ಯ ಜಿಲ್ಲೆಯ 7 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ನಾನು 14 ತಿಂಗಳು ಸಿಎಂ ಹಾಗಿದ್ದಾಗ ಹಲವು ಕಾರ್ಯಕ್ರಮ ಕೊಟ್ಟಿದ್ದೇನೆ. ಜೆಡಿಎಸ್ ತೆಗೆಯಲು ಚಲುವರಾಯಸ್ವಾಮಿ ಸಂಚು ಮಾಡಿದ್ರು.

ಬಿಜೆಪಿ ಪಕ್ಷ ಬಂದು ಒಂದು ರೂ ಕೊಟ್ಟಿಲ್ಲ. ಹಲಗೂರು ಹನಿ ನೀರಾವರಿ ಗೆ 40೦ಕೋಟಿ ತಡೆದ್ರು ಇದು ನನ್ನ ತಪ್ಪ? ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ನವರು ಬಜೆಟ್ ಘೋಷಣೆ ಮಾಡಬೇಡಿ ಅಂದ್ರು. ಬಿಜೆಪಿಯವರು ಮಂಡ್ಯ ಜಿಲ್ಲೆಯ ಬಜೆಟ್ ಅಂತ ನಗುತ್ತಿದ್ದರು. 100 ಕೋಟಿ ಮಂಡ್ಯಕ್ಕೆ ಕೊಟ್ಟೆ ಎಲ್ಲವನ್ನು ಬೇರೆ ಕಡೆ ಬದಲಾವಣೆ ಮಾಡಿದ್ರು. ನಾನು ಎದೆ ಬಗೆದು ತೋರಿಸುವ ಅಗತ್ಯ ಇಲ್ಲ. ಜನರಿಗೆ ಗೊತ್ತಿದೆ ನಮ್ಮ ಬಗ್ಗೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ ಗ್ರಾಮದಲ್ಲಿ ಇಂದು ಮಾತನಾಡಿದಂತ ಅವರು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಪ್ರವಾಶ ಹಮ್ಮಿಕೊಂಡಿದ್ದೇನೆ. ಪ್ರತಿ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. 75 ಹಳ್ಳಿಗಳಲ್ಲಿ ಜನರನ್ನ ಭೇಟಿ ಮಾಡಿದ್ದೇನೆ. ನೆನ್ನೆಯ ಮಳವಳ್ಳಿಯ ಪ್ರವಾಸಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಕೊಟ್ಟಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ,ರಾಮನಗರ, ಪ್ರವಾಸ ಮಾಡಿದ್ದೇನೆ. ದೊಡ್ಡ ಮಟ್ಟದಲ್ಲಿ ಯಾತ್ರೆಗೆ ಜನರ ಪ್ರತಿಕ್ರಿಯೆ ಸಿಕ್ಕಿದೆ. ನಿಮ್ಮ ಜೊತೆ ನಾವು ಇದ್ದೇವೆ ನಿಮಗೆ ನಮ್ಮ ಬೆಂಬಲ ಇದೆ. ಹಲವಾರು ಸಮಸ್ಯೆಗಳನ್ನ ನಾವು ಎದುರಿಸುತ್ತಿದ್ದೇವೆ. ಎಲ್ಲಾ ಸಮಾಜದ ಜನರು ಮನವಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಜನತೆ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ರಾಜಕಾರಣದಲ್ಲಿ ಕೆಲವು ವ್ಯತ್ಯಾಸ ಹಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಚಿದ್ರ ಮಾಡಿದ್ದೇವೆ ಜೆಡಿಎಸ್ ಕೋಟೆ ಮುಗಿಸುತ್ತೇವೆ ಅಂತ ವಿರೋಧ ಪಕ್ಷದವರು ಹೇಳ್ತಾರೆ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್ ಅನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಮಂಡ್ಯ ಜಿಲ್ಲೆಯ ಜನತೆ ಎಲ್ಲಾ ಸಂದರ್ಭದಲ್ಲಿ ದೇವೇಗೌಡ್ರು ಕೈ ಹಿಡಿದಿದ್ದಾರೆ. ಈ ಭಾರಿ ಮತ್ತೊಮ್ಮೆ ಕುಮಾರಣ್ಣ ನ ಸಿಎಂ ಮಾಡಲು ಗೌರವ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಏನೇ ಪೈಪೋಟಿ ಮಾಡಿದ್ರು ಹಣ ತರಬೇಕು. ಕೆ.ಆರ್.ಪೇಟೆಯಲ್ಲಿ ನಮ್ಮದು ಸ್ವಲ್ಪ ತಪ್ಪಾಗಿ ಸೋತ್ತುದ್ದೇನೆ. ಹಣದ ಹೊಳೆ ಹರಿಸಿ ಬಿಜೆಪಿ ಕೆ ಆರ್ ಪೇಟೆ ಗೆದ್ದಿದ್ದು. ಯಾವ ಮುಖ ಎತ್ತಿಕೊಂಡು ಮಂಡ್ಯಕ್ಕೆ ಬಿಜೆಪಿ ಮತ ಕೇಳುತ್ತೆ. ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ನಿಂತಿದ್ದು ಕುಮಾರಸ್ವಾಮಿ. ರೈತರ ಸಾಲ ಮನ್ನ ಮಾಡಿದ್ದು ಮಂಡ್ಯ ರೈತರಿಗೆ ಅನುಕೂಲವಾಗಿದೆ. ಇವರ ಅತ್ತಿರ ಕಲಿಯುವ ಅವಶ್ಯಕತೆ ಇಲ್ಲ. ಮತದಾರರ ಮನಹೋಲಿಸಲು ಕಾಂಗ್ರೆಸ್ ತಂತ್ರ ಹೂಡಿದ್ದಾರೆ. ಅವರಿಗೆ ಬಿಟ್ಟಿದು ಜನರು ತೀರ್ಮಾನ ಮಾಡ್ತಾರೆ‌ ಎಂದರು.