ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ ಪ್ರತಿಧ್ವನಿ

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರತಿಧ್ವನಿಸಿದೆ. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು, ಮಹಾರಾಷ್ಟ್ರ ನಂಬರ್ ಪ್ಲೇಟ್ ಇದ್ದ ವಾಹನಗಳ ಮೇಲೆ ದಾಳಿ ನಡೆದಿರುವ ವಿಷಯ ಎತ್ತಿದರು. 'ಕಳೆದ 10 ದಿನಗಳಿಂದ ಮಹಾರಾಷ್ಟ್ರದಲ್ಲಿ ಹೊಸ ಸಮಸ್ಯೆ ತಲೆದೋರಿದೆ. ಕರ್ನಾಟಕದ ಮುಖ್ಯಮಂತ್ರಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರದ ಜನರು ನಿನ್ನೆ ಕರ್ನಾಟಕದ ಗಡಿಗೆ ತೆರಳಲು ಬಯಸಿದ್ದರು. ಆದರೆ, ಅವರನ್ನು ಥಳಿಸಲಾಯಿತು' ಎಂದರು.