ತಮ್ಮ ಆರೋಗ್ಯದ ಬಗ್ಗೆ 'ಶಾಕಿಂಗ್ ಮಾಹಿತಿ' ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ತಮ್ಮ ಆರೋಗ್ಯದ ಬಗ್ಗೆ 'ಶಾಕಿಂಗ್ ಮಾಹಿತಿ' ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ನನಗೆ ಬಹಳ ವರ್ಷ ಬದುಕುವ ಆಸೆ ಇದೆ, ನಾನು ಜನರ ಸೇವೆಗಾಗಿ ಹೆಚ್ಚು ವರ್ಷ ಬದುಕಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಮಾತನಾಡಿದ ಸಿದ್ದರಾಮಯ್ಯ ಹೀಗಂತ ಹೇಳಿದ್ದಾರೆ.

'ನನಗೆ ಈಗ ವಯಸ್ಸು 76 ಆಯಿತು, ಡಯಾಬಿಟಿಕ್ ನಿಂದ 10 ವರ್ಷ ಆಯಸ್ಸು ಕಡಿಮೆ ಆಗಿದೆ. ಎಷ್ಟು ವರ್ಷ ಬದುಕುತ್ತೇನೋ ಗೊತ್ತಿಲ್ಲ, ಆದರೆ ಜಾಸ್ತಿ ವರ್ಷ ಬದುಕುವ ಆಸೆಯಿದೆ. ಎಲ್ಲರೂ ಚೆನ್ನಾಗಿ ಇಟ್ಟುಕೊಳ್ಳಬೇಕು, ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು' ಎಂದಿದ್ದಾರೆ.

'ಕೋವಿಡ್ ಬಂದ ಮೇಲೆ ಆಸ್ಪತ್ರೆಗಳು ಹೆಚ್ಚಾಗಿದೆ, ಕೋವಿಡ್ ಬಂದ ಮೇಲೆ ಆಸ್ಪತ್ರೆಗಳಿಗೆ ಲಾಭ ಆಗಿದೆ , ಕೋವಿಡ್ ನಿಂದ ಜನರಿಗೆ ತೊಂದರೆ ಆಯಿತು ಆಸ್ಪತ್ರೆಗೆ ಅನುಕೂಲವಾಯಿತು' ಎಂದಿದ್ದಾರೆ.