ಕೊರೊನಾ ಆತಂಕ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಕೊರೊನಾ ಆತಂಕ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಉತ್ತಮ ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ಸುಧಾರಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಸಾಮಾನ್ಯ ಸಮಯದಲ್ಲಿ ಮನುಷ್ಯ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಹೊತ್ತಿದ್ದು ಇದನ್ನು ಖಾತರಿಪಡಿಸಲು ದಿನನಿತ್ಯ ಆಹಾರ ಸೇವನೆಯಲ್ಲಿ ಇನ್ನು ಹೆಚ್ಚು ಕಾಳಜಿವಹಿಸಿ ಪೌಷ್ಟಿಕ, ತಾಜಾ ಹಾಗೂ ಶುದ್ಧ ಆಹಾರವನ್ನು ಸ್ವೀಕರಿಸುವ ಹೊಣೆಗಾರಿಕೆ ಹೊತ್ತಿರುವರು, ಇದರನ್ವಯ ರಾಜ್ಯದ ಜನತೆಗೆ ಮುಂದೆ ಬರಬಹುದಾದ ಹೆಚ್ಚು ಸವಾಲುಗಳುಳ್ಳ ಕೋವಿಡ್ ರೋಗದ ಸಾಂಕ್ರಾಮಿಕತೆ ಪುನಃ ಉಲ್ಬಣವಾಗುವ ಸಾಧ್ಯತೆಯ ಸಮಯದಲ್ಲಿ ಪೌಷ್ಠಿಕವಾದ, ತಾಜಾ ಹಾಗೂ ಶುದ್ಧ ಆಹಾರವನ್ನು ಸೇವಿಸುವುದು ಅತೀ ಮುಖ್ಯವಾಗಿದೆ. ಆದುದರಿಂದ ಈ ಕೆಳಕಂಡ ಸೂಚನೆಗಳು ಹಾಗೂ ಸಲಹೆಗಳನ್ನು ವಾಲಿಸಲು ಸೂಚಿಸಿದ.

ಕೋವಿಡ್ 19 ಇದು ನೋವೆಲ್ ಕೊರೊನಾ ವೈರಸ್‌ನಿಂದ ಬರುವ ಕಾಯಿಲೆಯಾಗಿದೆ. ಪ್ರಪಂಚದ ಎಲ್ಲಾ ಕಡೆಯಲ್ಲೂ, ಕರೋನಾ ವೈರಸ್ ಸಾಂಕ್ರಮಿಕವಾಗಿ ಹರಡುತ್ತಿರುವುದರಿಂದ ಮಾನವನಿಗೆ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ಕರೋನಾ ವೈರಸ್ ಪ್ರಮುಖವಾಗಿ ಮನುಷ್ಯನ ಉಸಿರಾಟದ ಮೇಲೆ ತೊಂದರೆಯನ್ನುಂಟು ಮಾಡುವ ರೋಗಾಣುವಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬಲವರ್ಧಿಸಲು ಹಾಗೂ ಈ ರೋಗಾಣುವು ವಿಧಿಸಿರುವ ಹಲವಾರು ಹೊಸ ಸವಾಲುಗಳನ್ನು ಎದುರಿಸಲು ನಾವು ನಮ್ಮ ಆಹಾರ ಪದ್ಮ ಮತ್ತು ದೈನಂದಿನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.