ಸರಳ ರಾಜಕಾರಣಿ ಶಿವಾನಂದ ಅಂಬಡಗಟ್ಟಿ ನಿಧನ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಸರಳ ರಾಜಕಾರಣಿ ಶಿವಾನಂದ ಅಂಬಡಗಟ್ಟಿ ನಿಧನ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಧಾರವಾಡ, : ಸರಳ ಸಜ್ಜನ ರಾಜಕಾರಣಿ, ಸಮಾಜಮುಖಿ‌ ಚಿಂತಕರು, ಮಾಜಿ‌ ಶಾಸಕ ಶಿವಾನಂದ ಅಂಬಡಗಟ್ಟಿ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಿವಾನಂದ ಅಂಬಡಗಟ್ಟಿ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಅಳ್ನಾವರದಲ್ಲಿ ಗುರುವಾರ (ಫೆಬ್ರವರಿ 09) ಮಧ್ಯಾಹ್ನ 3 ಗಂಟೆಗೆ ನಡಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಮಾಜಿ ಶಾಸಕರ ನಿಧನಕ್ಕೆ ಸಿಎಂ ಸಂತಾಪ

ಹಾಗೆಯೇ ಶಿವಾನಂದ ಅಂಬಡಗಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ನನ್ನ ಆತ್ಮೀಯರಾಗಿದ್ದ ಶಿವಾನಂದ ಅಂಬಡಗಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಯಿತು.

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಹಾಗೆಯೇ ದೇವರು ಅವರ ಕುಟುಂಬಕ್ಕೂ ಹಾಗೂ ಅಭಿಮಾನಿಗಳಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.