ಟೀಂ ಇಂಡಿಯಾ ನಾಯಕತ್ವದಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ

ಟಿ20 ವಿಶ್ವಕಪ್‍ನಲ್ಲಿನ ಹಿನ್ನಡೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಚೇತನ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಕಿತ್ತೆಸೆದಿದೆ. ಅಲ್ಲದೇ ಮೂರು ಮಾದರಿಯ ಕ್ರಿಕೆಟ್‍ಗೆ ಪ್ರತ್ಯೇಕ ನಾಯಕನನ್ನು ನೇಮಿಸಲು ಬಿಸಿಸಿಐ ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ. ಸದ್ಯದಲ್ಲೇ ಬಿಸಿಸಿಐ ಹೊಸ ಆಯ್ಕೆ ಸಮಿತಿ ರಚಿಸಿ ನೂತನ ನಾಯಕತ್ವದ ಜವಾಬ್ದಾರಿ ಯಾರಿಗೆ ವಹಿಸಬೇಕೆಂದು ಚರ್ಚೆ ನಡೆಸಲಿದೆ. ಈ ಹಿನ್ನೆಲೆ, ಟಿ20 ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ ಅವರ ಪಾಲಾಗುವ ಸಾಧ್ಯತೆ ಇದೆ.