50 ದಿನ ಪೂರೈಸಿದ ಪಂಚರತ್ನಯಾತ್ರೆ: ಹೆಚ್ಡಿಕೆ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿದ JDS ಕಾರ್ಯಕರ್ತರು

ಸಿಂದಗಿ ಜೆಡಿಎಸ್ ಅಭ್ಯರ್ಥಿ ಅಕಾಲಿಕ ನಿಧನದಿಂದ ಮೊನ್ನೆ ವಿರಾಮದಲ್ಲಿದ್ದ ಪಂಚರತ್ನಯಾತ್ರೆ ಇವತ್ತು ಮುಂದುವರಿದಿದೆ. ಗುಮ್ಮಟನಗರಿಯಲ್ಲಿ ದಳಪತಿಗಳ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದೇ ವೇಳೆ ಪಂಚರತ್ನಯಾತ್ರೆಯು 50 ದಿನ ಪೂರೈಸಿದೆ.
ರಾಜ್ಯದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ 50ನೇ ದಿನಕ್ಕೆ ಕಾಲಿಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ 6ನೇ ದಿನ ಅದ್ಧೂರಿಯಾಗಿ ಸಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೊನೆಯ ದಿನವಾದ ನಿನ್ನೆ ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಕ್ಷೇತ್ರದಲ್ಲಿ ಯಾತ್ರೆ ಅಬ್ಬರಿಸಿದೆ. ಬಸವನಬಾಗೇವಾಡಿಯ ಇಂಗಳೇಶ್ವರ ಗ್ರಾಮದಿಂದ ಪಂಚರತ್ನ ರಥಯಾತ್ರೆ ಆರಂಭವಾಗಿ ಹಲವೆಡೆ ಸಂಚರಿಸ್ತು.
ಗುಮ್ಮಟನಗರಿಯಲ್ಲಿ ಕುಮಾರಸ್ವಾಮಿ 'ಪಂಚ' ಕಹಳೆ!
ಜೆಡಿಎಸ್ ಯಾತ್ರೆ 50ದಿನ ಪೂರೈಸಿದ ನೆನಪಿಗಾಗಿ ಇಂಗಳೇಶ್ವರ ಗ್ರಾಮದ ಕಾರ್ಯಕರ್ತರು ಹೆಚ್ಡಿಕೆ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿದ್ರು. ಮಹಿಳೆಯರು ಪೂರ್ಣಕುಂಭ ಹೊತ್ತು ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕುವ ಮೂಲಕ ಕುಮಾರಸ್ವಾಮಿಗೆ ಸ್ವಾಗತ ಕೋರಿದ್ರು. ಬಳಿಕ ಕುಮಾರಸ್ವಾಮಿ ಗ್ರಾಮದಲ್ಲಿ ದೇವರ ದರ್ಶನ ಪಡೆದ್ರು.
ಬಳಿಕ ಟಕ್ಕಳಕಿ ಗ್ರಾಮದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಜ್ಯೋತಿ ಬೆಳಗಿಸುವ ಮೂಲಕ ಹೆಚ್ಡಿಕೆ ಸಮಾವೇಶ ಉದ್ಘಾಟಿಸಿದ್ರು. ಬಸವನಬಾಗೇವಾಡಿ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ಬಸವನಬಾಗೇವಾಡಿ ಜೆಡಿಎಸ್ ಅಭ್ಯರ್ಥಿ ಪರಮಾನಂದ ತನಿಕೆದಾರ ಗೆಲ್ಲಿಸುವಂತೆ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ರು. ಮುತ್ತಗಿ ಕ್ರಾಸ್, ಮಟ್ಟಿಹಾಳ ಕ್ರಾಸ್, ಹಿರೇ ಆಸಂಗಿ, ಕೊಲ್ಹಾರಲ್ಲಿ ಪಂಚರತ್ನ ರಥಯಾತ್ರೆ ಸಂಚರಿಸ್ತು.